ತಹಸೀಲ್ದಾರ್ ಅಮಾನತಿಗೆ ಆಗ್ರಹಿಸಿ ದಸಂಸ ಧರಣಿ
ಪಿರಿಯಾಪಟ್ಟಣ: ಟಿ. ನರಸೀಪುರದ ತಹಸೀಲ್ದಾರ್ ಅರುಣಪ್ರಭ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ತಾಲೂಕು ಆಡಳಿತ ಭವನದ ಮುಂಭಾಗ ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ತಾಲೂಕು ಸಂಚಾಲಕ ಕುಮಾರ್ ಮಾತನಾಡಿ, ಟಿ. ನರಸೀಪುರ ತಾಲೂಕು ಕೊತ್ತೇಗಾಲ ಗ್ರಾಮದ ಜೀತದಾಳು ಶಿವಕುಮಾರ ಸಾವಿಗೆ ತಾಲೂಕು ಆಡಳಿತದ ವಿಫಲವೇ ಕಾರಣ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿದ ದಸಂಸ ಪದಾಧಿಕಾರಿಗಳ ಮೇಲೆ ಹೂಡಿರುವ ಮೊಕದ್ದಮೆಯನ್ನು ಕೈಬಿಡಬೇಕು. ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಎಚ್.ಕೆ. ಮಹೇಶ್, ಎಚ್.ಎಂ. ಚನ್ನಯ್ಯ, ಅಣ್ಣಯ್ಯ, ಪುಟ್ಟಸ್ವಾಮಿ, ರವಿ, ಮಾಯಪ್ಪ, ವಸಂತ್, ಸುಬ್ರಮಣಿ, ಸೈಯದ್ಫಯಾಜ್, ಗೋಪಾಲ್ ಇದ್ದರು.