ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಶದ ಪ್ರಗತಿಗೆ ಯುವಶಕ್ತಿ ಅವಶ್ಯ: ಜಯಪ್ರಕಾಶ್‌ಹೆಗ್ಡೆ

Rashmi Kasaragodu
Updated On : 2 Feb 2014, 1:01 am

ಮೈಸೂರು: ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಯುವಜನರ ಪಾತ್ರ ಅತ್ಯಗತ್ಯ, ಅವರೇ ರಾಷ್ಟ್ರ ನಿರ್ಮಾತೃಗಳು ಎಂದು ಚಿಕ್ಕಮಗಳೂರು- ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ನಗರದ ಸೈಲೆಂಟ್ ಶೋರ್ಸ್‌ನಲ್ಲಿ ರೊಟೇಷಿಯಾ-2014 ಅಂಗವಾಗಿ ಆಯೋಜಿಸಿದ್ದ 'ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸಂಸದರು ಹೇಗೆ ಆಯ್ಕೆಯಾಗುತ್ತಾರೆ. ಅವರ ಪಾತ್ರವೇನು, ಸ್ಥಾಯಿ ಸಮಿತಿಗಳ ನಿಜವಾದ ಕರ್ತವ್ಯವೇನು... ಜನಪ್ರತಿನಿಧಿಗಳಾದವರಿಗೆ ಇರುವ ಮುಖ್ಯ ಕರ್ತವ್ಯಗಳೇನು ಎಂಬಿತ್ಯಾದಿ ಕುರಿತು  ಮಾಹಿತಿ ನೀಡಿದರು. ಸಿಂಗಾಪುರ, ಮಲೇಷಿಯಾ, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಆಫ್ಘಾನಿಸ್ತಾನ್ ದೇಶಗಳಿಂದ ಸುಮಾರು 2,500 ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement