ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಮೈಸೂರು: ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅಡ್ಡಿಪಡಿಸಿದ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಪಾಲಿಕೆ ಎದುರು ಶುಕ್ರವಾರ ಪ್ರತಿಭಟಿಸಿದರು. ನಗರ ಕಾಂಗ್ರೆಸ್ ಸಮಿತಿ ಭವನ ನಿರ್ಮಿಸಲು ನಗರ ಪಾಲಿಕೆಯಿಂದ ಖಾತಾ ವರ್ಗಾಯಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದಿಸಲಾಗಿತ್ತು. ಕಾಂಗ್ರೆಸ್ ಭವನ ಕಟ್ಟಲು ಮುಂದಾದಾಗ ಯಾವುದೋ ಟ್ರಸ್ಟ್ ಬಂದು ಪಾಲಿಕೆ ಆಯುಕ್ತರನ್ನು ನಿಂದಿಸಿದ್ದರಿಂದ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಡಿಸಿಸಿ ಸದಸ್ಯ ಮಂಗಳಗೌರಿ ಸೇರಿದಂತೆ ಹಲವರು ಇದ್ದರು. ಉಚ್ಛಾಟನೆಗೆ ಮನವಿ: ನಗರ ಕಾಂಗ್ರೆಸ್ ಸಮಿತಿ ಭವನ ನಿರ್ಮಿಸು ವಿಷಯದಲ್ಲಿ ಹಾಲಿ ಶಾಸಕರ ವಿರುದ್ಧ ಪ್ರತಿಭಟಿಸಿರುವ ಮಂಗಳಗೌರಿ ಮತ್ತು ಮಾಲಾ ಮಹೇಂದ್ರ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿದರು.