ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಪೌತಿ ಖಾತೆಗೆ ಅರ್ಜಿ ಸಲ್ಲಿಸಲು ತಡೆ ಇಲ್ಲ'

Rashmi Kasaragodu
Updated On : 2 Feb 2014, 12:57 pm

ಪಿರಿಯಾಪಟ್ಟಣ: ಪೌತಿ ಖಾತೆಗೆ ಅರ್ಜಿ ಸಲ್ಲಿಸಲು ಯಾವುದೇ ದಿನಾಂಕ ನಿಗದಿಪಡಿಸಿಲ್ಲ, ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಉಪ ತಹಸೀಲ್ದಾರ್ ಸಿ.ಜಿ. ರವಿಶಂಕರ್ ಹೇಳಿದರು.
ತಾಲೂಕಿನ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಹಾರನಹಳ್ಳಿ ಹೋಬಳಿಯಲ್ಲಿ ಈವರೆಗೆ ಒಟ್ಟು 48 ಅರ್ಜಿಗಳು ಬಂದಿದ್ದು, ಪ್ರಸ್ತುತ ಹೋಬಳಿಯ ದೊಡ್‌ಡಕಮರವಳ್ಳಿ ಮತ್ತು ಚಪ್ಪರದಹಳ್ಳಿ ಪಂಚಾಯಿತಿಗಳಲ್ಲಿ ಆಂದೋಲನ ನಡೆಸಲಾಗಿದ್ದು, ಉಳಿದಿರುವ 7 ಪಂಚಾಯಿತಿಗಳಲ್ಲಿ ಪೌತಿ ಖಾತೆ ಆಂದೋಲನ ಏರ್ಪಡಿಸಿ ಅರ್ಜಿ ಸ್ವೀಕರಿಸಲಾಗುವುದು. ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಹಾಗೂ ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ
ವಿವೇಕಾನಂದರ ಕೊಡುಗೆ ಅಪಾರ

ಹುಣಸೂರು: ವಿವೇಕಾನಂದರು ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ಜ್‌ಞಾನಿ ಎಂದು ಅಂಜನಾದ್ರಿ ಟ್ರಸ್ಟ್‌ನ ಕಾರ್ಯದರ್ಶಿ ವಿ.ಎನ್. ದಾಸ್ ತಿಳಿಸಿದರು. ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ಹುಣಸೂರು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಅಂಜನಾದ್ರಿ ಟ್ರಸ್ಟ್‌ನ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದರ ಕುರಿತು ಅವರು ಉಪನ್ಯಾಸ ನೀಡಿದರು.
ವಿವೇಕಾನಂದರು ಉತ್ಸಾಹ, ಇಚ್ಛಾಶಕ್ತಿ, ಧೈರ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸ ಬಹುದು ಎಂಬುದನ್ನು ತೋರಿಸಿದ್ದಾರೆ ಎಂದರು. ಇದೆ ವೇಳೆ ವಿವೇಕಾನಂದರ ಕುರಿತ ಉಪನ್ಯಾಸ ಹಾಗೂ ವೀಡಿಯೋ ಪ್ರದರ್ಶನ ನೀಡಲಾಯಿತು. ಪ್ರಾಶುಂಪಾಲೆ ಪ್ರೊ. ಸೌಭಾಗ್ಯ, ಉಪನ್ಯಾಸಕರಾದ ಪುಟ್ಟಶೆಟ್ಟಿ, ಜ್ಞಾನಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement