ಬೈಕ್ ತಯಾರಿಕಾ ಸಂಸ್ಥೆ ಸುಜುಕಿ ಷೋ ರೂಂ ಆರಂಭ
ಮೈಸೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಕಂಪನಿಯು ಗ್ರಾಹಕರ ಅನುಕೂಲಕ್ಕಾಗಿ ಹಿನಕಲ್ನಲ್ಲಿ ಪಯೋನಿಕ್ಸ್ ಸುಜುಕಿ ಅಧಿಕೃತ ಮಾರಾಟ ಮತ್ತು ಸರ್ವೀಸ್ ಕೇಂದ್ರ ಆರಂಭಿಸಿದೆ. ಸುಜುಕಿ ಕಂಪನಿಯು ಮೂಲತ- ಜಪಾನ್ ದೇಶದ್ದಾಗಿದ್ದು, ಪ್ರಸ್ತುತ ಭಾರತದ ಘಟಕವು ಹರ್ಯಾಣದ ಗುರ್ಗಾಂವ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ 4.5 ಲಕ್ಷ ವಾಹನಗಳನ್ನು ತಯಾರಿಸುತ್ತಿದ್ದು, ವಿವಿಧ ವಿನ್ಯಾಸದ ದ್ವಿಚಕ್ರ ವಾಹನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಮೈಸೂರಿನಲ್ಲಿ ಇದೀಗ ಎರಡನೇ ಕೇಂದ್ರ ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಅಗರವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಕಂಪನಿಯು ರಾಜ್ಯದಲ್ಲಿ ಒಟ್ಟು 24 ಅಧಿಕೃತ ಮಾರಾಟ ಕೇಂದ್ರ ಹೊಂದಿದೆ. ಸುಜುಕಿ ಕಂಪನಿಯ ಬೈಕ್ಗಳಿಗೆ ಮೈಸೂರಿನಲ್ಲಿ ಉತ್ತಮ ಬೇಡಿಕೆ ಇದೆ ಎಂದು ತಿಳಿಸಿದರು.