ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮಕ್ಕಳನ್ನು ದುಡಿಮೆಬದಲು ಶಾಲೆಗೆ ಕಳುಹಿಸಿ'

Rashmi Kasaragodu
Updated On : 2 Feb 2014, 12:56 pm

ಕೆ.ಆರ್. ನಗರ: ಸಮುದಾಯದ ಸಹಕಾರದೊಂದಿಗೆ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡುವುದರ ಜತೆಗೆ, ಮಕ್ಕಳನ್ನು ದುಡಿತಕ್ಕೆ ಕಳುಹಿಸದೆ ಶಾಲೆಗೆ ದಾಖಲಾತಿ ಮಾಡುವಂತೆ ಪೋಷಕರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಉಪ ತಹಸೀಲ್ದಾರ್ ತಿಮ್ಮಯ್ಯ ಹೇಳಿದರು.
ತಾಪಂ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಮತ್ತು ಜ್ಞಾನಜ್ಯೋತಿ ಸಂಸ್ಥೆ ಆಯೋಜಿದ್ದ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಬಡಜನತೆಯ ತೊಂದರೆಯನ್ನು ನೀಗಿಸಲು ಕೆ.ಜಿ.ಗೆ ಒಂದು ರು.ನಂತೆ 30 ಕೆ.ಜಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಸಮವಸ್ತ್ರ, ಪಠ್ಯ-ಪುಸ್ತಕ ಮತ್ತು ಸೈಕಲ್ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುತ್ತಿದ್ದರೂ ಜನತೆ ಮಕ್ಕಳನ್ನು ದುಡಿತಕ್ಕೆ ಕಳುಹಿಸುತ್ತಿರುವುದು ವಿಷಾದನಿಯ ಎಂದು ತಿಳಿಸಿದರು.

 ನಾಳೆಯಿಂದ ಅಂತರಸಂತೆ ಜಾತ್ರೆ

ಅಂತರಸಂತೆ: ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಮಹದೇಶ್ವರ ಸ್ವಾಮಿಯ ಈ ಬಾರಿಯ ಜಾತ್ರಾ ಮಹೋತ್ಸವವು ಫೆ.3 ರಿಂದ 5ರವರೆಗೆ ನಡೆಯಲಿದೆ.   ಮೂರು ದಿನವೂ ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ ಇರುತ್ತದೆ ಹಾಗೂ ರಾತ್ರಿ ವೇಳೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದೆ. ಉತ್ತಮ ಜಾನುವಾರುಗಳಿಗೆ ಬಹುಮಾನವನ್ನು ಗ್ರಾಪಂ ವತಿಯಿಂದ ನೀಡಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಎ. ರಾಜಪ್ಪ ತಿಳಿಸಿದ್ದಾರೆ.   
ನಗರ ಸಾರಿಗೆ: ಜಾತ್ರಾ ಮಹೋತ್ಸವದ ದಿನದಿಂದ ಎರಡು ನಗರ ಬಸ್‌ಗಳ ವ್ಯವಸ್ಥೆ ಕಲ್ಪಿಸಿದ್ದು, ಈ ಬಸ್ ಸೋಗಹಳ್ಳಿಯವರೆಗೂ ಸಂಚರಿಸಲಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಖಾಸಗಿ ವಾಹನಗಳಿಂದ ಮುಕ್ತಿ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement