ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಖವಾಡ ಕಲಾ ಪ್ರದರ್ಶನಕ್ಕೆ ಚಾಲನೆ

Rashmi Kasaragodu
Updated On : 2 Feb 2014, 12:56 pm

ಮೈಸೂರು: ಮೂರು ದಿನಗಳ ಕಾಲ ಆಯೋಜಿಸಿರುವ ಸಾಂಝಿ ಮುಖವಾಡ ಕಲಾ ಪ್ರದರ್ಶನವು ಅಗ್ರಹಾರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆರಂಭವಾಯಿತು.
ಸಾಂಝಿ ಕಲಾಲೋಕದ ಸಂಯುಕ್ತಾಶ್ರಯದಲ್ಲಿ ಕಲಾವಿದ ಎಸ್.ಎಫ್ ಹುಸೇನಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಕಲಾ ಪ್ರದರ್ಶನ ಹಾಗೂ ಕಾರ್ಯಾಗಾರವನ್ನು ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ, ಸಾಹಿತಿ ಪಿ.ಎಂ. ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿದ್ದರು. ಗ್ಯಾಲರಿಯ ಅಧ್ಯಕ್ಷ ಎಲ್. ಶಿವಲಿಂಗಪ್ಪ, ಖಜಾಂಚಿ ಪ್ರಭಾ ಶಿವಲಿಂಗಪ್ಪ ಇದ್ದರು. ಮೂಲತಃ ಮಥೂರದ ಈ ಸಾಂಝಿ (ಅಲಂಕಾರ) ಕಲೆಯು ಅಲ್ಲಿನ ಜನರ ಕಲೆಯ ಪ್ರತೀಕ. ಕತ್ತರಿ ಉಪಯೋಗಿಸಿ ಕಾಗದದ ಮುಖೇನ ವಿವಿಧ ಮುಖವಾಡಗಳನ್ನು ರಚಿಸುವುದು ಇದರ ವೈಶಿಷ್ಟ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement