ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೌಖಿಕಕ್ಕಿಂತ ಲಿಖಿತ ಆದೇಶ ಮುಖ್ಯ: ಅಧಿಕಾರಿಗಳಿಗೆ ಕಿವಿಮಾತು

Rashmi Kasaragodu
Updated On : 2 Feb 2014, 1:04 am

ಮೈಸೂರು: ಜನಪ್ರತಿನಿಧಿಗಳು ಮೌಖಿಕವಾಗಿ ಹೇಳುವ ಕೆಲಸಗಳನ್ನು ಲಿಖಿತವಾಗಿ ಪಡೆದು ಕೆಲಸ ಮಾಡಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಆಡಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ನಂಜನಗೂಡು ತಾಲೂಕು ನೇರಳೆ ಗ್ರಾಮ ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಆಹಾರ ಪದಾರ್ಥಗಳ ದುರ್ಬಳಕೆ ಕುರಿತು ಎಂ.ಪಿ. ಸುರೇಶ್  ದೂರನ್ನು ಅವರು ವಿಚಾರಣೆ ನಡೆಸಿದರು.
ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಂದ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಈ ವಿಚಾರದಲ್ಲಿ ನನ್ನ ಮೇಲೆ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ ಎಂದು ಮುಖ್ಯ ಶಿಕ್ಷಕಿಟೊಬ್ಬರು ಕಣ್ಣೀರು ಹಾಕಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾ. ಆಡಿ ಅವರು, ಯಾರೇ ಏನೇ ದೂರು ಕೊಡಲಿ, ಆರೋಪ ಮಾಡಲಿ. ನೀವು ಸರಿಯಾಗಿದ್ದರೇ ಯಾವುದಕ್ಕೂ ಹೆದರಬೇಕಿಲ್ಲ. ನಿಮ್ಮ ವಿರುದ್ಧ ಸುಳ್ಳು ದೂರು ನೀಡಿರುವುದು ಸಾಬೀತಾದರೇ ಅಂತಹವ ವಿರುದ್ಧವೇ ನೀವು ಸಹ ದೂರು ನೀಡಿ. ಸುಳ್ಳು ದೂರು ಕೊಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ, ಸಚಿವರು ಸೇರಿದಂತೆ ಯಾವುದೇ ಜನಪ್ರತಿನಿಧಿ ಯಾವುದೇ ಕೆಲಸವನ್ನು ಹೇಳಿದರು ಅದನ್ನು ಅಧಿಕಾರಿಗಳು ಲಿಖಿತವಾಗಿ ತೆಗೆದುಕೊಂಡು ಆ ಕೆಲಸ ಮಾಡಬೇಕು. ಮೌಖಿಕ ಆದೇಶ ಪಾಲಿಸಲು ಹೋಗಬೇಡಿ. ಇದರಿಂದ ಮುಂದೆ ಇಕ್ಕಟ್ಟಿಗೆ ಸಿಲುಕುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement