ಯರಹಳ್ಳಿಯಲ್ಲಿ ನಿಖರ ಪಡಿತರ ವ್ಯವಸ್ಥೆಗೆ ಚಾಲನೆ
ಹ್ಯಾಂಡ್ಪೋಸ್ಟ್: ಎಚ್.ಡಿ. ಕೋಟೆ ತಾಲೂಕಿನ ಯರಹಳ್ಳಿಯಲ್ಲಿ ಸರ್ಕಾರದ ಮಹತ್ವದ ಯೋಜನೆಯಾ ಅನ್ನಭಾಗ್ಯದ ನಿಖರ ಪಡಿತರ ವ್ಯವಸ್ಥೆಗೆ ಶನಿವಾರ ಚಾಲನೆ ನೀಡಲಾಯಿತು. ಚಾಲನೆ ನೀಡಿದ ಆಹಾರ ಇಲಾಖೆಯ ಶಿರಸ್ತೇದಾರ್ ಕೆ.ಆರ್. ರಘುನಾಥಾಚಾರ್ ಮಾತನಾಡಿ, ಈ ವ್ಯವಸ್ಥೆಯನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಪಡಿತರ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು ಫೆ. 1 ರಿಂದ 10 ರೊಳಗೆ ಪಡಿತರ ಪಡೆದುಕೊಳ್ಳಬೇಕು. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ನ್ಯಾಯಬೆಲೆ ಅಂಗಡಿ ತೆರೆದರಿಬೇಕಾಗುತ್ತದೆ ಎಂದರು. ಉಪ ತಹಸೀಲ್ದಾರ್ ಪುಟ್ಟಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ದೇವರಾಜು, ಗ್ರಾಪಂ ಸದಸ್ಯರಾದ ಪುಷ್ಪ, ಕೇಶವಮೂರ್ತಿ, ಕೃಷ್ಣ, ಸರೋಜಮ್ಮ, ಸದಾನಂದ, ಮಹದೇವು, ಸೋಮೇಶ್, ನಾಗರಾಜು, ಮೊಹಮ್ಮದ್ ಫಾಜೀಲ್, ಗುರುಬಸವಯ್ಯ ಇದ್ದರು.