ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೊಬೈಲ್ ಕೋಚಿಂಗ್
ಮೈಸೂರು: ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ನೀಡಲು ಮೊಬೈಲ್ ಮೂಲಕ ಕೋಚಿಂಗ್ ನೀಡಲು ಐಪೊಮೊ ಸಂಸ್ಥೆಯು ಕಾರ್ಯಕ್ರಮ ಹಮ್ಮಿಕೊಂಡಿದೆ. ಸಿಇಟಿ, ಕೊಮೊಡ್ಕೆ ಮತ್ತು ಪಿಇಎಸ್ಎಸ್ಎಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಕಲಿಕೆ ಮಟ್ಟವನ್ನು ಮೊಬೈಲ್ ಮೂಲಕ ಅರಿಯಲು ಇದೀಗ ಹೊಸ
ತಂತ್ರಜ್ಞಾನ ಸಂಶೋಧಿಸಲಾಗಿದೆ ಎಂದು ಸಂಸ್ಥೆ ನಿರ್ದೇಶಕ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊಬೈಲ್ ಲರ್ನಿಂಗ್ ತಂತ್ರಜ್ಞಾನದಿಂದ ತಯಾರಿಕಾ ಪೂರ್ವ ಪರೀಕ್ಷೆ ಫಲಿತಾಂಶಗಳನ್ನು ತಕ್ಷಣ ನೀಡುವುದು ಮಾತ್ರವಲ್ಲ, ವಿವಿಧ ಸಾಮಾನ್ಯ ವಿಷಯ ಹಾಗೂ ವಿವಿಧ ಪಠ್ಯ ವಿಷಯ ಬಗ್ಗೆಯೂ ಮಾಹಿತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಮಾಹಿತಿ ನೀಡಲು ರಾಜ್ಯಾದ್ಯಂತ ಫ್ರೀ ಟೆಸ್ಟ್ ಕಾರ್ಯಕ್ರಮ ಏರ್ಪಡಿಸಿದ್ದು, ಫೆ. 2 ರಂದು ಮಹಾರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದರು.