ಶಾಸ್ತ್ರೀಯ ಸಂಗೀತ ಸ್ಪರ್ಧೆ ವಿಜೇತರಿಗೆ ಬಹುಮಾನ
ಮೈಸೂರು: ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಧರ್ಮಸ್ಥಳ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮೀ ನಾಗರಾಜು ಸ್ಮಾರಕ ಅಂತರ ಕಾಲೇಜು ಶಾಸ್ತ್ರೀಯ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ವಾನ್ ಎಂ.ಟಿ. ಸೆಲ್ವ ನಾರಾಯಣ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಪ್ರೊ.ಕೆ.ವಿ. ದಾಮೋದರಗೌಡ ಮಾತನಾಡಿ, ಭಾರತೀಯ ಸಂಗೀತ ಅಭ್ಯಾಸದ ಮಹತ್ವ ಕುರಿತು ತಿಳಿಸಿದರು. ಎಸ್‌ಡಿಎಂ ಮಹಿಳಾ ಕಾಲೇಜಿನ ಜಿ.ಆರ್. ಅಪರ್ಣ ಪ್ರಥಮ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಸುಭಾಷಿಣಿ ದ್ವಿತೀಯ, ಎನ್‌ಐಇ ಕಾಲೇಜಿನ ಮೇಖಲಾ ತೃತೀಯ ಬಹುಮಾನ ಮತ್ತು ಅಮೃತ ವಿದ್ಯಾಲಯದ ಹರ್ಷಿತ ಭಟ್ ಸಮಾಧಾನಕರ ಬಹುಮಾನ ಪಡೆದರು. ಢಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ವಿ. ಆಶಾ, ಲಕ್ಷ್ಮೀ ನಾಗರಾಜು, ನಳಿನಿ ಶ್ರೀಕಂಠನ್ ಇದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ವಿದುಷಿ ಪ್ರೇಮಾ ನಂಜುಂಡಯ್ಯ ಇದ್ದರು.