ಸಕಾಲದಲ್ಲಿ ಪಡಿತರ ದೊರೆಯಲಿ: ಶಾಸಕ
ಪಿರಿಯಾಪಟ್ಟಣ: ಎಲ್ಲ ಕಾರ್ಡುದಾರರಿಗೂ ವ್ಯವಸ್ಥಿತವಾಗಿ ಪಡಿತರ ಪದಾರ್ಥಗಳು ನಿಗದಿತ ವೇಳೆಯಲ್ಲಿ ದೊರಕಬೇಕೆಂಬುದು ಸರ್ಕಾರದ ಉದ್ದೇಶ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್‌ನ ಪಡಿತರ ವಿತರಣಾ ವಿಭಾಗದಲ್ಲಿ ಕಾರ್ಡುದಾರರಿಗೆ ಪಡಿತರ ನೀಡುವ ಮೂಲಕ ಪಡಿತರ ಖಾತ್ರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಅರ್ಹ ಫಲಾನುಭವಿ ಪಡಿತರದಾರರಿಗೆ ಸೂಕ್ತ ರೀತಿಯಲ್ಲಿ ಹಾಗೂ ಸರಿಯಾದ ಸಮಯಕ್ಕೆ ಪಡಿತರ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ನಿರ್ದೇಶಕರಾದ ಎಲ್.ಜೆ. ಶ್ರೀನಿವಾಸ್, ಪುಟ್ಟರಾಜು, ರಾಜಯ್ಯ, ಚಂದ್ರಶೇಖರ್, ಸ್ವಾಮಿಗೌಡ, ವಿರೂಪಾಕ್ಷ, ಆಹಾರ ಶಿರಸ್ತೇದಾರ್ ದಿವಾಕರ್ ಇದ್ದರು.