ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಸ್ಟೆಲ್ ಜಿಪಂ ಅಧ್ಯಕ್ಷರ ಭೇಟಿ: ಮೇಲ್ವಿಚಾರಕರು ತರಾಟೆಗೆ

Rashmi Kasaragodu
Updated On : 2 Feb 2014, 12:57 pm

ಹುಣಸೂರು:  ಸರ್ಕಾರ ನೀಡುವ ಅನುದಾನ ವಸತಿನಿಲಯದ ವಿದ್ಯಾರ್ಥಿಗಳಿಗೆ ಹೊರತು ನೌಕರರಿಗಲ್ಲ ಎಂದು ಮೇಲ್ವಿಚಾರಕಿ ಲಕ್ಷ್ಮಿಕಾಂತ ಅವರನ್ನು ಜಿಪಂ ಅಧ್ಯಕ್ಷ ಎಂ. ಮಹದೇವ್ ತರಾಟೆ ತೆಗೆದುಕೊಂಡರು.
ಙಪಟ್ಟಣದ ಮೆಟ್ರಿಕ್ ನಂತರದ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿದ ಅವರು, ಅಡಿಗೆ ಮನೆ, ಮಲಗುವ ಕೊಠಡಿ, ಸ್ನಾನ ಮತ್ತು ಶೌಚಾಲಯ ವ್ಯವಸ್ಥೆ ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಮಹದೇವ್ ವಸತಿ ನಿಲಯದ ಊಟ ಮಾಡಿ, ಮೇಲ್ವಿಚಾರಕಿ ಮತ್ತು ಅಡಿಗೆ ಸಹಾಯಕಿಯರನ್ನು ಕರೆದು ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಯಾವ ಆಹಾರ ಪದಾರ್ಥ ನೀಡುತ್ತೀರಿ ಎಂದು ಪ್ರಶ್ನಿಸಿದರು.ಙಮಕ್ಕಳ ಹಣ ತಿಂದರೆ ನಿಮಗೆ ಒಳ್ಳೆಯದಾಗದು. ನಾನು ಮುಂದಿನ ಭಾರಿ ಭೇಟಿ ನೀಡುವಷ್ಟರಲ್ಲಿ ಎಲ್ಲವೂ ಸರಿ ಇರಬೇಕು ಎಂದಾಗ ಮೇಲ್ವಿಚಾರಕರು ಕಣ್ಣೀರಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement