7 ರಂದು ಸಿದ್ಧರಾಮೇಶ್ವರ ಜಯಂತಿ
ಎಚ್.ಡಿ. ಕೋಟೆ: ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ಸ್ಥಳೀಯ ಜನತೆಯ ಸಹಕಾರದೊಂದಿಗೆ ಫೆ.7 ರಂದು ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಗುವುದು ಎಂದು ಜನಾಂಗದ ಮುಖಂಡರಾದ ಎಂ.ಜಿ. ರಾಮಕೃಷ್ಣಪ್ಪ ಹೇಳಿದರು. ತಾಲೂಕಿನ 53 ಹಳ್ಳಿಗಳಲ್ಲಿ ಒಟ್ಟು 15 ಸಾವಿರ ಮಂದಿ ಭೋವಿ ಸಮಾಜದವರು ವಾಸವಾಗಿದ್ದಾರೆ. ಈವರೆಗೆ ಜಿಲ್ಲಾಮಟ್ಟದಲ್ಲಿ ಮಾತ್ರ ಜಯಂತಿ ಆಚರಿಸಲಾಗುತ್ತಿತ್ತು. ಈ ಬಾರಿ ತಾಲೂಕಿನಲ್ಲಿ ಆಚರಿಸುತ್ತಿರುವುದರಿಂದ ಜನಾಂಗದವರು ಆಚರಣಾ ಸಮಿತಿಗೆ ಸಂಪೂರ್ಣ ಸಹಕಾರ ನೀಡಬೇಕು. ಜಯಂತಿ ಆಚರಣೆ ಅಂಗವಾಗಿ ಅಂದು ಪಟ್ಟಣದ ಬಾಲಕರ ಕಾಲೇಜು ಮೈದಾನದಿಂದ ಮೆವರಣಿಗೆ ಹೊರಟು ಅಂಬೇಡ್ಕರ್ ಭವನದ ಮುಂಭಾಗ ಕೊನೆಗೊಳ್ಳಲಿದೆ.