ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ನಿಂದ ಚಹಾವಾಲಾ ವೃತ್ತಿಗೆ ಅಗೌರವ

Rashmi Kasaragodu
Updated On : 3 Feb 2014, 12:53 pm

ಮೈಸೂರು: ಚಹಾವಾಲಾ ವೃತ್ತಿಯನ್ನು ಕಾಂಗ್ರೆಸ್ ನಾಯಕರು ಅಗೌರವಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಕಿಡಿಕಾರಿದರು.
ದೊಡ್ಡಕರೆ ಮೈದಾನದ ವಸ್ತುಪ್ರದರ್ಶನ ಪ್ರಾಧಿಕಾರದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ನಗರ ಟೀ ಸ್ಟಾಲ್ ವ್ಯಾಪಾರಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಗುಜರಾತಿನ ನರೇಂದ್ರ ಮೋದಿ ಅವರು ಒಬ್ಬ ಚಹಾವಾಲಾ ಆಗಿದ್ದ ವ್ಯಕ್ತಿ. ಅವರು ಈ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಕೇಂದ್ರದ ಹಿರಿಯ ಸಚಿವರೊಬ್ಬರು ಮಾತನಾಡಿದ್ದಾರೆ. ಯಾವುದೇ ವೃತ್ತಿಯನ್ನು ಈ ರೀತಿ ನಿಕೃಷ್ಟವಾಗಿ ಕಾಣುವುದು ಸಲ್ಲದು. ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅಗರ್ಭ ಶ್ರೀಮಂತರಿರಬಹುದು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಡತನದಿಂದ ಬಂದಿರುವವರು ಇರಬಹುದು. ಆದರೆ ಒಬ್ಬ ಬಡವ ಈ ದೇಶದ ಪ್ರಧಾನಿಯಾಗಬಾರದೆ ಎಂದು ಪ್ರಶ್ನಿಸಿದರು.
ಯಾರ ಹೃದಯದಲ್ಲಿ ಕಾಂಗ್ರೆಸ್ ಇರುತ್ತದೋ, ಅಂಥವರಿಗೆ ಲೋಕಸಭೆಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ರಾಹುಲ್ ಗಾಂಧಿ ಎಐಸಿಸಿ ಸಭೆಯಲ್ಲಿ ನುಡಿದಿದ್ದಾರೆ. ಅದೇ ನರೇಂದ್ರ ಮೋದಿ ಅವರು, ಯಾರ ಹೃದಯದಲ್ಲಿ ತಾಯಿ ಭಾರತಾಂಬೆ ಇರುತ್ತಾಳೋ ಅಂಥವರಿಗೆ ಪಕ್ಷ ಲೋಕಸಭೆಗೆ ಟಿಕೆಟ್ ನೀಡಲಿದೆ ಎಂದು ಘೋಷಿಸಿದ್ದಾರೆ. ಇದು ನಿಜವಾದ ದೇಶಪ್ರೇಮ ಎಂದರು.
ಸಂಘದ ಸಂಚಾಲಕ ಕೆ.ಎನ್. ಚಂದ್ರಶೇಖರ್, ಬಿಜೆಪಿ ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ವಿ. ಸೋಮಶೇಖರ್, ನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಆರ್. ರಾಮಪ್ರಸಾದ್, ಚಂದ್ರಶೇಖಕರ ಶೆಟ್ಟಿ, ಪ್ರತಾಪ್ಸಿಂಗ್, ಶಾಂತಿಲಾಲ್ ಪುರೋಹಿತ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement