ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿದ ಬಸ್- ಕಾರು

Rashmi Kasaragodu
Updated On : 3 Feb 2014, 12:52 pm

ಭೇರ್ಯ: ಕೆ.ಆರ್. ನಗರ ತಾಲೂಕಿಗೆ ಭಾನುವಾರ ಅಪಶಕುನದ ದಿನ. ಯಾಕೆಂದರೆ ಒಂದೇ ದಿನ ಎರಡು ಕಡೆ ರಸ್ತೆ ಅಪಘಾತ ಸಂಭವಿಸಿದ್ದು, ಒಂದು ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮತ್ತೊಂದು ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೆ ಪ್ರಯಾಣಿಕರು ಬದುಕುಳಿದಿದ್ದಾರೆ.
ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ಕೆಎಸ್ಆರ್ಟಿಸಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಮೃತಪಟ್ಟರು. ಮತ್ತೊಂದು ಪ್ರಕರಣದಲ್ಲಿ ಭೇರ್ಯದ ಹಾಸನ- ಮೈಸೂರು ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟಾಟಾ ಇಂಡಿಕಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ, ಕಾರಿನ ಸಮೇತ ಬಸ್ಸೂ ಹಳ್ಳಕ್ಕೆ ಉರುಳಿದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೇ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೇರ್ಯದಲ್ಲಿ ನಡೆಯುತ್ತಿರುವ ಮದುವೆಗೆ ರಾಮನಗರದಿಂದ ಬಂದಿದ್ದವರ ಟಾಟಾ ಇಂಡಿಕಾ ಕಾರು, ಮೈಸೂರಿನಿಂದ- ಹೊರನಾಡಿಗೆ ಹೋಗುತ್ತಿದ್ದ ಬಸ್ಸನ್ನು ಗಮನಿಸದೆ ಏಕಾಏಕಿ ಮಧ್ಯರಸ್ತೆಗೆ ಚಲಿಸಿದೆ. ಹಿಂದೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಲಭಾಗಕ್ಕೆ ಬಂದಾಗ ಮತ್ತೆ ಕಾರಿನ ಚಾಲಕ ಬಲ ಭಾಗಕ್ಕೆ ಕಾರನ್ನು ತಿರುಗಿಸಿದಾಗ ಬಸ್ಸು ಕಾರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಹಳ್ಳಕ್ಕೆ ಕಾರನ್ನು ಎಳದುಕೊಂಡು ಹೋಗಿ ಬಿದ್ದಿದೆ. ಕೂಡಲೇ ಬಸ್ಸಿನಲ್ಲಿದ ಪ್ರಯಾಣಿಕರು ಕಾರ್ ಚಾಲಕ ದಿಲೀಪ್ ಆತನ ಜೊತೆಯಲ್ಲಿದ್ದ ಸೋಮಶೇಖರ್ ಇಬ್ಬರನ್ನು ಹೊರತೆಗೆಯಲಾಗಿದೆ. ಬಸ್ಸಿನಲ್ಲಿದ 52 ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೇ ಸುರಕ್ಷಿತವಾಗಿ ಬಸ್ ಚಾಲಕ ಸಂಗಮೇಶ್ ಬಸ್ಸನ್ನು ಕಂಟ್ರೋಲ್ ಮಾಡಿದರು ಎಂದು ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರತ್ಯಕ್ಷದರ್ಶಿ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement