ಭ್ರಷ್ಟಾಚಾರ ಹತ್ತಿಕ್ಕಲು ಕಾವಲುಪಡೆ ಸಜ್ಜು
ಪಿರಿಯಾಪಟ್ಟಣ: ರಾಜ್ಯದ ನೆಲ, ಜಲ, ಗಡಿ ಅಲ್ಲದೆ ಸಮಾಜದಲ್ಲಿನ ಅಮಾಯಕರ ಮೇಲೆ ಭ್ರಷ್ಟ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ ಶೋಷಣೆ ಹತ್ತಿಕ್ಕಲು ಕರ್ನಾಟಕ ಕಾವಲುಪಡೆ ಸಜ್ಜಾಗಿದೆ ಎಂದು ಕಾವಲುಪಡೆ ತಾಲೂಕು ಅಧ್ಯಕ್ಷ ಎಚ್.ಎ. ಸುಬ್ರಮಣಿ ಹೇಳಿದರು. ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಕಾವಲುಪಡೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕಾವಲುಪಡೆಯ ಸದಸ್ಯರು ಹಾಗೂ ಪದಾಧಿಕಾರಿಕಾರಿಗಳು ಸುಮ್ಮನೆ ಕಾಲಹರಣ ಮಾಡದೆ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಕಾವಲುಪಡೆಯನ್ನು ಯಾವುದೆ ಕಾರಣಕ್ಕೂ ವೈಯಕ್ತಿಕ ಹಾಗೂ ಅನ್ಯ ಕಾರ್ಯಗಳಿಗೆ ಬಳಸಬಾರದು. ಕಾವಲುಪಡೆಗೆ ದಕ್ಕೆಬಾರದ ಹಾಗೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಕಾವಲುಪಡೆಯ ಪದಾಧಿಕಾರಿಗಳಾದ ಯೋಗೇಶ್, ಅಫ್ಜಲ್, ಮೋಹನ್, ಫ್ರಾನ್ಸಿಸ್, ಗೋವಿಂದರಾಜು, ಶಿವರಾಜು ಇದ್ದರು.
ತೂಕ ಯಂತ್ರಕ್ಕೆ ಸರ್ಕಾರಿ ಮುದ್ರೆ
ಪಿರಿಯಾಪಟ್ಟಣ: ತೂಕ ಮತ್ತು ಅಳತೆ ಇಲಾಖೆ ವತಿಯಿಂದ ತೂಕ ಮಾಡುವ ಯಂತ್ರೋಪಕರಣಗಳಿಗೆ ಸರ್ಕಾರಿ ಮುದ್ರೆ ಹಾಕುವ ಹಾಗೂ ಸತ್ಯಾಪನ ಮಾಡುವ ಕಾರ್ಯ ಚಾಲನೆಯಲ್ಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ಬಿ.ಎಂ. ರಸ್ತೆಯ ಶ್ರೀ ನಂಜುಂಡೇಶ್ವರ ಕಾಂಪ್ಲೆಕ್ನಲ್ಲಿ ಇಲಾಖೆ ವತಿಯಿಂದ ಮುದ್ರೆ ಹಾಕುವ ಶಿಬಿರ ನಡೆಯುತ್ತಿದ್ದು (ಪ್ರತಿ ಸೋಮವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ವರ್ತಕರು ಅಳತೆ ಮಾಡುವ ಯಂತ್ರೋಪಕರಣ ಹಾಗೂ ತಕ್ಕಡಿಗಳನ್ನು ತಂದು ಸರ್ಕಾರಿ ಮುದ್ರೆ ಹಾಕಿಸಿಕೊಳ್ಳುವಂತೆ ತಿಳಿಸಿದ್ದಾರೆ.