ಮದುವೆ ಸಮಾರಂಭದಲ್ಲಿ ಭಾಗಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಲಲಿತಮಹಲ್ ಹೊಟೇಲ್ನಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದರು. ಹೆಲಿಕಾಪ್ಟರ್ನಲ್ಲಿ ಸುತ್ತೂರು ಶ್ರೀಕ್ಷೇತ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು, ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಬೇಕಿದೆ ಎಂದು ಹೇಳಿ ಸುತ್ತೂರು ಹೆಲಿಪ್ಯಾಡ್ನಿಂದ ಹೊರಟರು. ಆದರೆ, ಸುತ್ತೂರಿನಿಂದ ಹೊರಟ ಹೆಲಿಕಾಪ್ಟರ್ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಇಳಿಯಿತು. ಬಳಿಕ ಲಲಿತಮಹಲ್ ಹೊಟೇಲ್ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ಮಾಹಿತಿ ಪಡೆದರು. ನಂತರ ಪೊಲೀಸ್ ಭವನದಲ್ಲಿ ನಡೆದ ಮದುವೆಯೊಂದರಲ್ಲಿ ಭಾಗವಹಿಸಿ, ವಧು-ವರರಿಗೆ ಆಶೀರ್ವದಿಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು.