ಮುಳ್ಳೂರು ಗ್ರಾಮದಲ್ಲಿ ಪೂಜೆ
ಸರಗೂರು: ಸಮೀಪದ ಮುಳ್ಳೂರು ಗ್ರಾಮದಲ್ಲಿ ಆರ್ಎಂಎಸ್ಎ ಯೋಜನೆಅಡಿಯಲ್ಲಿ ಸರ್ಕಾರಿ ಪೌಢಶಾಲೆಯ ನೂತನ ಐದು ಕೊಠಡಿಗಳು ಹಾಗೂ ಕುಡಿಯುವ ನೀರು ಶೌಚಾಲಯ ನಿರ್ಮಾಣಕ್ಕೆ ಸಂಸದ ಆರ್. ಧ್ರುವನಾರಾಯಣ್ ಗುದ್ದಲಿಪೂಜೆ ನೆರವೇರಿಸಿದರು. ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಶಾಲೆಗೆ 41.51 ಲಕ್ಷ ಮಂಜೂರಾಗಿದೆ. ಈ ಹಣದಲ್ಲಿ ಐದು ಕೊಠಡಿಗಳು, ಶೌಚಾಲಯ ನಿರ್ಮಿಸಲಾಗುವುದು. ಶಾಲೆಯು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವುದು ಶ್ಲಾಘನೀಯ ಎಂದರು. ಎಐಸಿಸಿ ಸದಸ್ಯರಾದ ಡಿ. ಸುಂದರದಾಸ್, ತಾಪಂ ಅಧ್ಯಕ್ಷೆ ಚಂದ್ರಮ್ಮ, ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು, ಮಂಜುನಾಥ ಎಚ್.ಸಿ. ರವಿಕುಮಾರ್, ಮುಳ್ಳೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ ಸೋಮಣ್ಣ, ಉಪಾಧ್ಯಕ್ಷೆ ನಾಗರತ್ನಮ್ಮ ಚೆನ್ನನಾಯಕ, ಸದಸ್ಯರಾದ ಮಹದೇವನಾಯ್ಕ, ಗೌರಮ್ಮ, ಶ್ರೀಕಂಠ, ಪುಟ್ಟಸ್ವಾಮಿ(ವಾಣಿ), ಗೋವಿಂದನಾಯ್ಕ, ಸಿಂಗೇಗೌಡ, ಪುಟ್ಟಮ್ಮ, ಮಂಜನಾಥ್, ಭಾಗ್ಯ, ಕುಮಾರಿ, ಶಶಿ, ಶಂಕರ್ ಇದ್ದರು.