ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿವಕುಮಾರ್ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಿ

Rashmi Kasaragodu
Updated On : 3 Feb 2014, 12:54 pm

ಎಚ್.ಡಿ. ಕೋಟೆ: ಟಿ.ನರಸೀಪುರ ತಾಲೂಕು ಕೊತ್ತೇಗಾಲ ಗ್ರಾಮದ ಜೀತದಾಳು ಶಿವಕುಮಾರ್ ಕುಟುಂಬಕ್ಕೆ ಬಿಡುಗಡೆ ಪತ್ರ ಹಾಗೂ ಪುನರ್ ವಸತಿ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಸಂಘಟನಾ ಸಂಚಾಲಕ ಉಮೇಶ್ ಆಗ್ರಹಿಸಿದರು. ಸುಬ್ಬಣ್ಣ ಎಂಬವರ ಮನೆಯಲ್ಲಿ ಜೀತ ಮಾಡುತ್ತಿದ್ದು, ಹಣದ ವಿಷಯವಾಗಿ ಮಾಲೀಕನ ಕಿರುಕುಳ ತಾಳಲಾರದೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಕುಟುಂಬ ಬೀದಿಪಾಲಾಗಿದ್ದು, ಶಿವಕುಮಾರ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಿಹಾರಕ್ಕಾಗಿ ಒತ್ತಾಯಿಸಿ ಧರಣಿ ನಡೆಸಿದ ದಸಂಸ ಕಾರ್ಯಕರ್ತ ಮೇಲೆ ಹೂಡಲಾದ ದಾವೆ ಹಿಂಪಡೆಯುವಂತೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ನರಸೀಪುರ ತಾಲೂಕಿನಲ್ಲಿ ಜೀತದಾಳುಗಳು ಇದ್ದು ಅವರ ಸಮೀಕ್ಷೆ ಕೈಗೊಳ್ಳಬೇಕು. ರಾಜ್ಯದ ಮುಖ್ಯಮಂತ್ರಿಗಳು ಶಿವಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಸಂಚಾಲಕ ಬಸವರಾಜು, ಚಂದ್ರಶೇಖರಮೂರ್ತಿ, ಶಿವಣ್ಣ, ಮಹದೇವು ಇದ್ದರು.
ಸಂಘದ ಅನುಕೂಲ ಪಡೆದುಕೊಳ್ಳಿ
ಸಾಲಿಗ್ರಾಮ: ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ವಿವಿಧ ಮೂಲಗಳಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಟನಹಳ್ಳಿ ಲೋಕೇಶ್ ಹೇಳಿದರು. ಪಟ್ಟಣದ ಸಂಘದ ಕಚೇರಿಯಲ್ಲಿ 20 ಮಹಿಳಾ ಸ್ವ ಸಹಾಯ ಸಂಘಗಳಿಗೆ ಸುಮಾರು 51.55 ಲಕ್ಷ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಕೇವಲ ಸಂಘಕ್ಕೆ ಹಣವನ್ನು ಕಟ್ಟುವುದು ಮತ್ತು ಸಾಲವನ್ನು ಪಡೆಯುವುದಕ್ಕಷ್ಟೇ ತಮ್ಮ ಕಾರ್ಯಚಟುವಟಿಕೆ ಸೀಮಿತಗೊಳಿಸಿಕೊಳ್ಳಬಾರದು. ಜಾಗೃತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಯತ್ನಿಸಬೇಕು ಎಂದರು. ಸಂಘದ ನಿರ್ದೇಶಕ ಎಸ್.ಬಿ. ಅಶೋಕ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್.ಎಸ್. ಮಧು, ಸಿಬ್ಬಂದಿಯಾದ ಶಶಿಧರ್, ಸುರೇಶ್, ಪ್ರಕಾಶ್ ಇದ್ದರು.
ವಿಕಲಚೇತನರಿಂದ ಅರ್ಜಿ ಆಹ್ವಾನ
ಎಚ್.ಡಿ. ಕೋಟೆ: ಪಪಂ ವತಿಯಿಂದ ಎಚ್.ಡಿ. ಕೋಟೆ ಟೌನ್ ವ್ಯಾಪ್ತಿಯಲ್ಲಿರುವ ಅಂಗವಿಕಲರಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲು ಮತ್ತು ಮೂರು ಚಕ್ರದ ಮೋಟಾರ್ ಸ್ಕೂಟರ್ ವಿತರಿಸಲು ಅರ್ಹ ಅಂಗವಿಕಲರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆ. 10 ಕೊನೆಯ ದಿನ. ಮಾಹಿತಿಗಾಗಿ ದೂ. 08228-255327 ಸಂಪರ್ಕಿಸಬಹುದು.
ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ
ನಂಜನಗೂಡು: ಪಟ್ಟಣ ವ್ಯಾಪ್ತಿಯ ಶ್ರೀಕಂಠೇಶ್ವರ ದೇವಸ್ಥಾನದ ಹತ್ತಿರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಫೆ.4ರ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಹಳ್ಳದಕೇರಿ, ಮಹದೇವ ನಗರ ಕುಡಿಯುವ ನೀರಿನ ಸ್ಥಾವರ ಮತ್ತು ತಮ್ಮಡಗೆರೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.
ಕಾರು ಪಲ್ಟಿ: ವ್ಯಕ್ತಿ ಸಾವು
ಹುಣಸೂರು: ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಗ್ರಾಮದ ಬಳಿ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಸೀಪ್ಟ್ ಕಾರು ಉರುಳಿಬಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೆರಗನೂರು ಗ್ರಾಮದ ವಾಸಿ ಸಿದ್ದಲಿಂಗಯ್ಯ ಪುತ್ರ ಲಿಂಗರಾಜು (33) ಮೃತಪಟ್ಟ ದುರ್ದೈವಿ. ಈತನಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಈತನ ಜತೆಯಲ್ಲಿದ್ದ ಸದರಿ ಗ್ರಾಮದ ಚಂದನ್, ಸತೀಶ್, ದೀಕ್ಷಿತ್, ಹರೀಶ್ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement