ಸಮಾಜಸೇವೆಗೆ ಸಮಯ ಮೀಸಲಿಡಲು ಕರೆ
ಮೈಸೂರು: ಕಲಿಯುವ ಸಮಯದಲ್ಲಿ ವಿದ್ಯಾರ್ಥಿಗಳು ಗ್ರಾಮಾಂತರದ ಪ್ರದೇಶದ ಶಾಲಾ ಮಕ್ಕಳಲ್ಲಿ ಗಣಕ ಯಂತ್ರದ ಉಪಯೋಗಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ತರಬೇತಿ ನೀಡಲು ಮುಂದಾಗಿರುವ ವಿದ್ಯಾರ್ಥಿಗಳ ಸಮಾಜ ಸೇವೆ ಆದರ್ಶವಾದದು ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು. ವಿವಿಧ ಎಂಜಿನಿಯರಿಂಗ್ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಒಟ್ಟುಗೂಡಿ ಕುವೆಂಪುನಗರದಲ್ಲಿ ಸ್ಥಾಪಿಸಿರುವ ಯಶಸ್ವಿ ಗ್ರೂಪ್ ಆಫ್ ಸೋಷಿಯಲ್ ವರ್ಕ್ಸ್ನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯ ಓದುವುದಕ್ಕಾಗಿಯೇ ಮೀಸಲಿಡದೇ, ಪುಸ್ತಕ ಹುಳುಗಳಾಗದೇ, ಉದಾರ ಮನಸ್ಸಿನಿಂದ ಸಮಾಜ ಸೇವೆಗೆ ವಿನಿಯೋಗಿಸುವಂತೆ ತಿಳಿಸಿದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ನಂಜುಂಡಪ್ಪ, ಯಶಸ್ವಿ ಗ್ರೂಪ್ ಆಫ್ ಸೋಷಿಯಲ್ ವರ್ಕ್ಸ್ನ ಅಧ್ಯಕ್ಷ ಬಿ.ಸಿ. ಸೌಜನ್ಯ ಶೇಖರ್, ಉಪಾಧ್ಯಕ್ಷೆ ರಚನ, ಕಾರ್ಯದರ್ಶಿ ಸುಶ್ಮಿತ ಇದ್ದರು. ವಂದನಾ ಸ್ವಾಗತಿಸಿದರು. ಆರ್. ಶಿವಕುಮಾರ್, ಸಿ. ಶಿವಕುಮಾರ್ ನಿರೂಪಿಸಿದರು.