ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

8 ರಂದು ಮಾಗಡಿ ಡೇಸ್ ನಾಟಕ

Rashmi Kasaragodu
Updated On : 4 Feb 2014, 1:29 am

ಮೈಸೂರು: ವೃತ್ತಿನಿರತ ಹವ್ಯಾಸಿ ಕಲಾವಿದರು ಒಟ್ಟುಗೂಡಿ ರಚಿಸಿಕೊಂಡಿರುವ ವಿಮೂವ್ ಥಿಯೇಟರ್ ಸಂಸ್ಥೆಯಿಂದ ಫೆ. 8ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ಮಾಗಡಿ ಡೇಸ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಸನ್ನಿವೇಶವನ್ನು ವಿಡಂಬನಾತ್ಮಕವಾಗಿ ಬರೆಹ ರೂಪಕ್ಕೆ ಇಳಿಸಿ, ರಂಗ ವೇದಿಕೆ ಮೇಲೆ ಸಾದರಪಡಿಸಲು ಈ ನಾಟಕ ರೂಪಿಸಿದ್ದೇವೆ. ಕಲಾವಿದರಿಗ್ಯಾಕೆ ರಾಜಕೀಯ ಅನ್ನೋ ಪ್ರಶ್ನೆಗೆ ಸರಳ ಉತ್ತರ, ಸಾಮಾಜಿಕ ಕಳಕಳಿಯಷ್ಟೇ. ಮತ್ಯಾವ ಉದ್ದೇಶವೂ ಇಲ್ಲ. ಬರಹಗಾರನ ಒಂದು ಕಾಲ್ಪನಿಕ ಕಥೆಯಾಗಿರುವ ನಾಟಕ ಇಂದಿನ ನೈಜ ಜೀವನಕ್ಕೆ ಮತ್ತು ಪ್ರಸ್ತುತ ರಾಜಕೀಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ನಿರ್ದೇಶಕ ಅಭಿಷೇಕ್ ಅಯ್ಯಂಗಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಫ್ಟ್ವೇರ್ ಎಂಜಿನಿಯರ್ ಅನಂತ್ ಕೆಲಸ ಬಿಟ್ಟು ರಾಜಕಾರಣ ಸೇರಿ, ಮುಖ್ಯಮಂತ್ರಿಯಾಗಿ ಸ್ಪೆಂಡ್ ಲೆಸ್ ಗವರ್ನಮೆಂಟ್ ಅಂತ ಕರೆಸಿಕೊಳ್ಳೋ ಯೋಜನೆಗಳನ್ನು ಜಾರಿಗೊಳಿಸಿ, ನಂತರ ಜನರಿಗೆ ಹತ್ತಿರವಾಗೋ ದೃಷ್ಟಿಯಿಂದ ರಾಜಕಾರಣದಲ್ಲಿ ಫೇಸ್ಬುಕ್ನ ಬಳಕೆಯನ್ನು ಕಡ್ಡಾಯಗೊಳಿಸುತ್ತಾನೆ. ಆದರೆ, ಅದರಿಂದ ಅವಾಂತರಗಳಿಗೆ ಸಿಕ್ಕಿ ಹಾಕಿಕೊಂಡು, ಸರಳವಾಗಿದ್ದ ಮನುಷ್ಯ ನಿಧಾನವಾಗಿ ಇಂದಿನ ರಾಜಕಾರಣಿಗಳಂತೆ ಚುನಾವಣೆಗೆ ಮುನ್ನವೇ ಜನರ ಬೇಡಿಕೆ ಈಡೇರಿಸುವ ಮಟ್ಟಕ್ಕೆ ಬದಲಾಗುತ್ತಾನೆ. ಅವನ ಅವಾಂತರಕ್ಕೆ ಇನ್ನೂ ಅನೇಕರು ಕಾರಣರಾಗಿತ್ತಾರೆ. ನಂತರ ಏನಾಗುತ್ತದೆ ಎಂಬುದೇ ನಾಟಕದ ಸಸ್ಪೆನ್ಸ್ ಆಗಿದ್ದು ಎಲ್ಲರೂ ನೋಡಬಹುದು. ನಾಟಕಕ್ಕೆ 80 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು. ಕಲಾವಿದರಾದ ರಂಗನಾಥ ಭಟ್ಟಾಚಾರ್ಯ, ಅನಿರುಧ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement