ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರ್ಟಿಐ ಅರ್ಜಿಗೆ ಸಕಾಲದಲ್ಲಿ ಉತ್ತರ ನೀಡಿ

Rashmi Kasaragodu
Updated On : 4 Feb 2014, 1:29 am

ಪಿರಿಯಾಪಟ್ಟಣ: ಮಾಹಿತಿ ಹಕ್ಕಿನಡಿ ಬರುವ ಅರ್ಜಿಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಎಂ.ಕೆ. ಸವಿತಾ ಹೇಳಿದರು.
ತಾಲೂಕು ಆಡಳಿತ ಭವನದಲ್ಲಿ ಅಧಿಕಾರಿಗಳು ಹಾಗೂ ಸಹಾಯಕ ಮಾಹಿತಿ ಅಧಿಕಾರಿಗಳಿಗಾಗಿ ಆಡಳಿತ ಸಂಸ್ಥೆ ಮೈಸೂರು ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ಮಾಹಿತಿ ಹಕ್ಕು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿಯನ್ನು ಸಮರ್ಪಕ ಹಾಗೂ ನಿಗದಿತ ಸಮಯದಲ್ಲಿ ನೀಡಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳಲ್ಲಿನ ಭ್ರಷ್ಟಾಚಾರ ಹಾಗೂ ಉದಾಸೀನ ಮನೋಭಾವವನ್ನು ಮಾಹಿತಿ ಹಕ್ಕು ಕಾಯ್ದೆ ಕಡಿವಾಣ ಹಾಕಿದೆ ಎಂದು ತಿಳಿಸಿದರು.
ಆಡಳಿತ ತರಬೇತಿ ಸಂಸ್ಥೆಯ ಮುರಳೀಧರ್ ಮಾತನಾಡಿ, ಅಧಿಕಾರಿಗಳು ಸಾಧ್ಯವಾದಷ್ಟು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಸಾರ್ವಜನಿಕರಿಗೆ ಅಗತ್ಯ ಎನಿಸುವ ಮಾಹಿತಿ ನೀಡಬೇಕು ಎಂದರು.
ತಾಪಂ ಇಒ ಮಹದೇವಸ್ವಾಮಿ ಮಾತನಾಡಿದರು. ಆಡಳಿತ ತರಬೇತಿ ಸಂಸ್ಥೆಯ ಯೋಗನಾಥ್ಸಿಂಗ್, ಬಿಇಒ ರಾಮಲಿಂಗು, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಸಿಡಿಪಿಒ ದೇವಕುಮಾರ್, ಸಮಾಜ ಕಲ್ಯಾಣಾಧಿಕಾರಿ ನಾರಾಯಣ್ ಇದ್ದರು.
ತಹಸೀಲ್ದಾರ್ ಅಸಮಾಧಾನ: ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ನಿಗದಿಯಾಗಿತ್ತು. ಗಂಟೆ 11 ಆದರೂ ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗದಿರುವ ಬಗ್ಗೆ ಹಾಗೂ ಕೆಲವು ಅಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿ ಕಳುಹಿಸಿದ್ದರ ಬಗ್ಗೆ ತಹಸೀಲ್ದಾರ್ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸಭೆಗಳಿಗೆ, ಕಾರ್ಯಕ್ರಮಗಳಿಗೆ ಬಾರದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.



ಇಂದು ಸಂಸದೆ ರಮ್ಯಾ ಭೇಟಿ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ರಮ್ಯಾ ಫೆ.4 ರಂದು ಮಂಗಳವಾರ ತಾಲೂಕಿನ ಹಂಪಾಪುರ ಮತ್ತು ಅಡಗೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಆಲಿಸುವರು. ಬೆಳಗ್ಗೆ 11ಕ್ಕೆ ಮಂಚನಹಳ್ಳಿ, 11.30ಕ್ಕೆ ಬಡಕನಕೊಪ್ಪಲು, 12ಕ್ಕೆ ದೊಡ್ಡಕೊಪ್ಪಲು, 12.30ಕ್ಕೆ ಗಳಿಗೆಕೆರೆ, ಮಧ್ಯಾಹ್ನ ಒಂದಕ್ಕೆ ಅಡಗೂರು, 1.30ಕ್ಕೆ ಮಾರಗೌಡನಹಳ್ಳಿ, 2.30ಕ್ಕೆ ಅರ್ಜುನಹಳ್ಳಿ, 3ಕ್ಕೆ ಕಲ್ಯಾಣಪುರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ತಿಳಿಸಿದ್ದಾರೆ.



ಗರ್ಭಿಣಿ ಮೇಲೆ ಹಲ್ಲೆ: ಆರೋಪಿ ಸೆರೆ
ಟಿ. ನರಸೀಪುರ: ತಾಲೂಕಿನ ವಾಟಾಳು ಗ್ರಾಮದಲ್ಲಿ ಗರ್ಭಿಣಿ ಮೇಲೆ ಹಲ್ಲೆ ನಡೆಸಿ, ಗರ್ಭಪಾತಕ್ಕೆ ಕಾರಣನಾದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ವಾಟಾಳು ಗ್ರಾಮದ ಲೇಟ್ ಮಲ್ಲಪ್ಪ ಎಂಬುವರ ಪುತ್ರ ರಾಜೇಶ ಬಂಧಿತ ಆರೋಪಿ. ಈತ ತನ್ನ ಸಹೋದರ ಲೋಕೇಶ, ಸ್ನೇಹಿತರಾದ ಯೋಗೇಶ ಹಾಗೂ ನಂದೀಶರ ಜೊತೆಗೂಡಿ ಮಹೇಶ ಮತ್ತು ವಾಣಿ ದಂಪತಿ ಮೇಲೆ ಕಳೆದ ನ.16 ರಂದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ವಾಣಿ ಹೊಟ್ಟೆಗೆ ಪೆಟ್ಟುಬಿದ್ದಿದ್ದ ಹಿನ್ನೆಲೆಯಲ್ಲಿ ಆಕೆಗೆ ಗರ್ಭಪಾತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಜಾಮೀನು ದೊರೆತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement