ಉಜ್ಜೈನಿಯ ಉಮಾಕಾಂತಜಿ ಉಪನ್ಯಾಸ
ಮೈಸೂರು: ಉಜ್ಜೈನಿ ಮಠದ ಶ್ರೀ ಉಮಾಕಾಂತಜಿ ಅವರು ಲೋಕ ಕಲ್ಯಾಣಾರ್ಥವಾಗಿ ದಕ್ಷಿಣ ಭಾರತದಲ್ಲಿ ಯಾತ್ರೆ ಆರಂಭಿಸಿದ್ದಾರೆ. ಇಲ್ಲಿನ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಉಪನ್ಯಾಸ ಸಭೆಯಲ್ಲಿ ಭಾಗವಹಿಸಿದ್ದ ಅವರು ಶಾಖಾಹಾರದ ಬಗ್ಗೆ ಪ್ರವಚನ ನೀಡಿದರು. ಪ್ರಕೃತಿ ವಿಕೋಪಗಳು ನಮ್ಮಿಂದಲೆ ಆಗುತ್ತಿವೆ. ಆದ್ದರಿಂದ ನಾವು ಪ್ರಕೃತಿಯನ್ನು ರಕ್ಷಿಸಬೇಕು. ಮಾಂಸಾಹಾರ ತ್ಯಜಿಸಬೇಕು ಎಂದರು. ಜ.27 ರಂದು ಬೆಳಗಾವಿ ಮೂಲಕ ಕರ್ನಾಟಕ ಪ್ರವೇಶಿಸಿರುವ ಈ ಯಾತ್ರೆ ಸೋಮವಾರ ಮೈಸೂರಿಗೆ ಅಗಮಿಸಿತು. ಫೆ.27ಕ್ಕೆ ಈ ಯಾತ್ರೆ ಅಂತ್ಯಗೊಳ್ಳಲಿದೆ. ಗೋವನ್ನು ರಾಷ್ಟ್ರೀಯ ಪಶು ಎಂದು ಘೋಷಿಸುವ ಸಂಬಂಧ ಪ್ರಧಾನ ಮಂತ್ರಿಗಳು, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರಿಗೆ ಈ ಯಾತ್ರೆ ಮೂಲಕ ಮನವಿ ಪತ್ರ ಸಲ್ಲಿಸುತ್ತಿದ್ದಾರೆ. ಸುಮಾರು 200 ಬೈಕ್ಗಳಲ್ಲಿ 400ಕ್ಕೂ ಹೆಚ್ಚು ಮಂದಿ ಶ್ರೀಗಳ ಅನುಯಾಯಿಗಳು ಈ ಯಾತ್ರೆಯಲ್ಲಿ ಆಗಮಿಸಿದ್ದಾರೆ ಎಂದರು.