ಕೆಎಸ್ಎಪಿಎಸ್ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ
ಮೈಸೂರು: ಮುಷ್ಕರ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಗುತ್ತಿಗೆ ನೌಕರರು ಬೇಡಿಕೆಗಳನ್ನು ಈಡೇರಿಸಿ ತಮಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಎಚ್ಐವಿ ಪೀಡಿತರು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಎಚ್ಐವಿ ಅರಿವು, ಆಪ್ತ ಸಮಾಲೋಚನೆ ಹಾಗೂ ಸಿಡಿ4 ಪರೀಕ್ಷೆ ಮಾಡದಿರುವುದರಿಂದ ಎಚ್ಐವಿ ಪೀಡಿತರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಎಚ್ಐವಿ ಪೀಡಿತರಿಗೆ ಸರಿಯಾದ ಕ್ರಮದಲ್ಲಿ ಮಾತ್ರೆಗಳನ್ನು ನೀಡುತ್ತಿಲ್ಲ. ಇದರಿಂದ ಕೆಲವರಿಗೆ ವೈಪರಿತ್ಯ ಮತ್ತು ಅನಾನುಕೂಲ ಆಗಿದೆ ಎಂದು ಆರೋಪಿಸಿದ್ದಾರೆ.
ಮೊದಲಿನಂತೆ ನಮಗೆ ವೈದ್ಯಕೀಯ, ಮಾನಸಿಕ ಬೆಂಬಲ ಇಲ್ಲದೇ ತೊಂದರೆ ಆಗುತ್ತಿದೆ. ನಮ್ಮ ಆರೋಗ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇನ್ನಾದರೂ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರವು ಮುಂದೆ ಬರಬೇಕು. ಎಚ್ಐವಿ ಪೀಡಿತರನ್ನು ರಕ್ಷಿಸಬೇಕು ಎಂದು ನೊಂದ ಎಚ್ಐವಿ ರೋಗಿಗಳಾದ ಎಂ. ಜಯಮ್ಮ, ದೇವಮ್ಮ, ಮಣಿ, ರತ್ನ, ನಂಜಮ್ಮ, ಕೋಟ, ಕೆಂಪಮ್ಮ, ಕುಮಾರ, ಪ್ರಸಾದ್, ಆನಂದ ಜ್ಯೋತಿ ನೆಟ್ವರ್ಕ್ನ ಅಕ್ರಂ ಪಾಷ ಅವರು ಒತ್ತಾಯಿಸಿದ್ದಾರೆ.