ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಗರದಲ್ಲೂ ಕಸದ ಪುನರ್ಬಳಕೆ

Rashmi Kasaragodu
Updated On : 4 Feb 2014, 1:28 am

ಕ.ಪ್ರ.ವಾರ್ತೆ    ಮೈಸೂರು    ಫೆ. 3
ಕಸದ ಪುನರ್ಬಳಕೆ ಕುರಿತು ಯೋಜನೆ ರೂಪಿಸುವ ಸಂಬಂಧ ಸೋಮವಾರ ಮೇಯರ್ ಎನ್.ಎಂ. ರಾಜೇಶ್ವರಿ ನೇತೃತ್ವದ ತಂಡ ವಿದ್ಯಾರಣ್ಯಪುರಂ ಸಮೀಪದ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿತ್ತು.
ಕಳೆದ ವಾರ ಹೈದರಾಬಾದ್ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಸಮ್ಮೇಳನಕ್ಕೆ ತೆರಳಿದ್ದ ಈ ತಂಡ ಮೈಸೂರಿನಲ್ಲಿಯೂ ಕಸದ ಪುನರ್ಬಳಕೆ ಮತ್ತು ಭೂಮಿಯಲ್ಲಿ ಕರಗದ ಕಸದಿಂದ ಜೈವಿಕ ಇಂಧನ ತಯಾರಿಸುವುದು ಸೇರಿದಂತೆ ವಿವಿಧ ಯೋಜನೆ ರೂಪಿಸಲು ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರ ಪಾಲಿಕೆಯಲ್ಲಿ ಸಭೆ ಕರೆಯಲಾಗಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ನರ್ಮ್ ಯೋಜನೆಯಡಿ ವಿವಿಧ ಕಾರ್ಯಕ್ರಮ ರೂಪಿಸಿ ಶೂನ್ಯ ಕಸ ನಿರ್ವಹಣಾ ಘಟಕ ತೆರೆಯುವುದು, ಕಸ ಸಂಗ್ರಹಿಸುವ ಮೂಲದಲ್ಲಿಯೇ ಕಸ ಬೇರ್ಪಡಿಸಿ ವಿಲೇವಾರಿ ಮಾಡುವುದು. ಕಸದ ಪುನರ್ಬಳಕೆ ಮತ್ತು ಗೊಬ್ಬರ ತಯಾರಿಕೆ ಘಟಕ ತೆರೆಯುವ ಹಿನ್ನೆಲೆಯಲ್ಲಿ ಇಲ್ಲಿನ ಕಸವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮುಂದಿನ 15 ರಿಂದ 20 ವರ್ಷಕ್ಕೆ ಅನುಕೂಲ ಆಗುವಂತೆ ಈ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚಿಂತಿಸಲುಗುವುದು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದರು.
ಸ್ಥಳಕ್ಕೆ ಬಾರದ ಎಸ್ಇ: ನಗರ ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಕೃಷ್ಣ ಅವರು ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸೋಮವಾರ ಭೇಟಿ ನೀಡದಿರುವುದು ಅನೇಕ ಪಾಲಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತುಂಬಾ ವಾಸನೆ ಇದೆ. ನಾನು ಬರುವುದಿಲ್ಲ ಎಂದು ಅಧೀಕ್ಷಕ ಎಂಜಿನಿಯರ್ ಘಟಕದ ಹೊರಗೆ ಉಳಿದರು. ಮೇಯರ್ ಮತ್ತು ಪಾಲಿಕೆ ಆಯುಕ್ತರು ಬರುವಂತೆ ಸೂಚಿಸಿದರೂ ಅವರ ಮಾತನ್ನು ಧಿಕ್ಕರಿಸಿದ ಕೃಷ್ಣ ತನಗೆ ಆರೋಗ್ಯ ಸರಿಯಿಲ್ಲ ಎಂಬ ನೆಪ ಹೇಳಿದರು ಎಂದು ಸಂದೇಶ್ ಸ್ವಾಮಿ ಆರೋಪಿಸಿದರು.
ಮೇಯರ್ ಎನ್.ಎಂ.ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ಆಡಳಿತ ಪಕ್ಷ ನಾಯಕ ಕೆ.ವಿ. ಮಲ್ಲೇಶ್, ಪ್ರತಿಪಕ್ಷ ನಾಯಕ ಡಿ.ನಾಗಭೂಷಣ್, ಮಾಜಿ ಮೇಯರ್ಗಳಾದ ಸಂದೇಶ್ ಸ್ವಾಮಿ, ಅಯೂಬ್ಖಾನ್, ಪುಷ್ಪಲತಾ ಚಿಕ್ಕಣ್ಣ, ಪುರುಷೋತ್ತಮ್, ಮಾಜಿ ಉಪ ಮೇಯರ್ಗಳಾದ ಎಂ.ಜೆ. ರವಿಕುಮಾರ್, ಮಹದೇವಪ್ಪ, ಸದಸ್ಯರಾದ ಮಹದೇವಮ್ಮ, ಗಿರೀಶ್ ಪ್ರಸಾದ್, ಆರ್. ಲಿಂಗಪ್ಪ, ಶಿವಕುಮಾರ್, ಕೆ.ಟಿ. ಚಲುವೆಗೌಡ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಸಹಾಯಕ ಆಯುಕ್ತ ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement