ಪಡಿತರ ಖಾತ್ರಿ ಯೋಜನೆಗೆ ಶಾಸಕರ ಚಾಲನೆ
ಸಾಲಿಗ್ರಾಮ: ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನೂತನವಾಗಿ ಜಾರಿಗೆ ಬಂದಿರುವ ಪಡಿತರ ಖಾತರಿ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ತಾಲೂಕಿನ ಸಾಲಿಗ್ರಾಮ ಪಟ್ಟಣದ ನಾಡಕಚೇರಿ ಬಳಿ ಇರುವ ಟಿಎಪಿಸಿಎಂಎಸ್ನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆರಂಭಿಸಿರುವ ಪಡಿತರ ಖಾತರಿ ಯೋಜನೆಗೆ ಫಲಾನುಭವಿಗಳಿಗೆ ಪಡಿತರ ವಿತರಿಸಿ ಮಾತನಾಡಿದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಜೆಡಿಎಸ್ ಮುಖಂಡ ಮೆಡಿಕಲ್ ರಾಜಣ್ಣ, ತಾಪಂ ಸದಸ್ಯ ತಂದ್ರೆಕೊಪ್ಪಲು ರವಿ, ಗ್ರಾಪಂ ಸದಸ್ಯ ಅಯಾಜ್, ಮಾದಾಪುರ ಸತೀಶ್, ರಾಜಸ್ವ ನಿರೀಕ್ಷಕ ಪ್ರಭಾಕರ್, ಆಹಾರ ಇಲಾಖಾ ಅಧಿಕಾರಿ ಕೃಷ್ಣೇಗೌಡ, ನಟರಾಜ್ ಇದ್ದರು.