ಬೀಜಗನಹಳ್ಳಿ: ದೇವರಾಜು ಅಧ್ಯಕ್ಷ
ಹುಣಸೂರು: ತಾಲೂಕಿನ ಬೀಜಗನಹಳ್ಳಿ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎಮ್ಮೇಕೊಪ್ಪಲು ಗ್ರಾಮದ ದೇವರಾಜು ಅವರನ್ನು ತಾಲೂಕು ಭೋವಿ ಯುವಕರ ಸಂಘದಿಂದ ಅಭಿನಂದಿಸಲಾಯಿತು. ಬೀಜಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭೋವಿ ಯುವಕರ ಸಂಘದ ಅಧ್ಯಕ್ಷ ಎಚ್.ವಿ.ಪರಮೇಶ್ ಮಾತನಾಡಿ, ಭೋವಿ ಸಮಾಜ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗವಾಗಿದ್ದು, ಬೀಜಗನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆ ಮಾಡಲು ಕಾರಣಿಭೂತರಾದ ಎಲ್ಲ ಜನಾಂಗದ ಮುಖಂಡರಿಗೆ, ಪಕ್ಷದ ವರಿಷ್ಠರಿಗೆ ಮತ್ತು ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ವೆಂಕಟೇಶ್ ಪಾಪು, ಸ್ವಾಮಿ ಭೋವಿ, ವಾಸು, ಪ್ರಕಾಶ್, ಸುರೇಶ್, ವೆಂಕಟೇಶ್, ಶಿವರಾಜ್ ತಂಗಡಗಿ ಮತ್ತು ಕರ್ನಾಟಕ ರಾಜ್ಯ ಭೋವಿ ಸಮಾಜದ ಯುವಕರ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ. ಪರಮೇಶ್ ಇದ್ದರು.