ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ವರೋಗದಿಂದ ದೂರ ಇರಲು ಯೋಗ ಮುಖ್ಯ

Rashmi Kasaragodu
Updated On : 4 Feb 2014, 1:30 am

ನಂಜನಗೂಡು: ಸರ್ವ ರೋಗಗಳಿಂದ ದೂರವಿರಲು ಯೋಗದಿಂದ ಮಾತ್ರ ಸಾಧ್ಯ ಎಂದು ಸಿಟಿಜನ್ ಕಾಲೇಜಿನ ಉಪನ್ಯಾಸಕ ಕೆ.ರಾಮಮೋಹನ್ ಹೇಳಿದರು.
ವಿದ್ಯಾವರ್ಧಕ ಶಾಲಾ ಆವರಣದಲ್ಲಿ ನಮೋ ಬ್ರಿಗೇಡ್ ಆಯೋಜಿಸಿದ್ದ ಉತ್ತಮ ಆರೋಗ್ಯಕ್ಕೆ ಯೋಗ, ದೇಶಕ್ಕೆ ಮೋದಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಆರೋಗ್ಯವಂತರಾಗಿಸಲು ಮತ್ತು ಅವರ ಮನಸ್ಸನ್ನು ಕೇಂದ್ರೀಕರಿಸಲು ಯೋಗ ಕಲಿಕೆ ಅತ್ಯಂತ ಉಪಯುಕ್ತ. ವಿದೇಶಗಳಲ್ಲಿ ಯೋಗ್ಯಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಅಲ್ಲಿನ ಜನತೆ ಆರೋಗ್ಯದಿಂದ ಇದ್ದು, ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ದೇಶದ ಅಭಿವೃದ್ಧಿಗೆ ಮತ್ತು ಜನತೆ ನೆಮ್ಮದಿಯಿಂದ ಬದುಕಲು ನರೇಂದ್ರ ಮೋದಿ ಬೆಂಬಲಿಸಿ, ಕಾಂಗ್ರೆಸ್ ಕಿತ್ತೊಗೆಯುವುದೊಂದೆ ದಾರಿ ಎಂದು ತಿಳಿಸಿದರು.
ನವಭಾರತನ ಸಂಜೀವ್ ಮಾತನಾಡಿ, ಸದೃಢ ಭಾರತ ಇಂದು ಅಪಾಯದಲ್ಲಿದೆ. ದೇಶ ಅಭಿವೃದ್ಧಿ ಪಥದತ್ತ ಸಾಗಲು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆ ನೀಡಲು ದೇಶದ ಜನತೆಯ ಕನಸು ನನಸು ಮಾಡಲು ಹೊರಟಿರುವ ನರೇಂದ್ರ ಮೋದಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಅಷ್ಟಾಂಗ ಯೋಗ ಶಾಲೆಯ ಶ್ರೀಕಂಠಪ್ರಸಾದ್ ತಂಡದಿಂದ ಯೋಗ ಪ್ರದರ್ಶಿಸಲಾಯಿತು. ಸಾರ್ವಜನಿಕರಿಗೆ ನಮೋ ಬ್ರಿಗೇಡ್ ಸಂಘಟನೆ ಕಾರ್ಯಕರ್ತರು ಟೀ ವಿತರಿಸಿದರು.
ಮುಖಂಡರಾದ ಸಂಜಯ್, ಮಹದೇವಸ್ವಾಮಿ, ಎಸ್.ಮಹದೇವಯ್ಯ, ಎನ್.ಆರ್. ಕೃಷ್ಣಪ್ಪಗೌಡ, ನಮೋ ಬ್ರಿಗೇಡ್ನ ಕಪಿಲೇಶ್, ಸಂಜಯ್ ಶರ್ಮ, ಚಂದನ್, ಬಸವಣ್ಣ, ಪ್ರಕಾಶ್, ಶಾಸ್ತ್ರಿ, ರಾಖೇಶ್, ಮಂಜು, ಮುದ್ದುಮಲ್ಲೇಶ್, ಚಂದ್ರು, ಪುರಸಭಾ ಸದಸ್ಯರಾದ ಮಹದೇವಸ್ವಾಮಿ, ಪ್ರದೀಪ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಂ. ಮಹೇಶ್, ಬಸವಣ್ಣ, ಇಲಿಯಾಸ್ ಅಹಮದ್, ಶಂಕರ್, ಭರತೇಶ್, ರಘು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement