ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ
ನಂಜನಗೂಡು: ತಾಲೂಕಿನ ಸಿಂಧುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಜಿಪಂ ಸದಸ್ಯ ಎಸ್.ಎಂ. ಕೆಂಪಣ್ಣ ಗುಂಪು ಜಯಗಳಿಸಿದೆ. ಕೆಂಪಣ್ಣ ಅವರ ಗುಂಪಿನ ವಿರುದ್ಧ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದು ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಒಟ್ಟು 11 ನಿರ್ದೇಶಕರ ಸ್ಥಾನಗಳಿಗೆ 18 ಅಭ್ಯರ್ಥಿಗಳು ಕಣದಲ್ಲಿದ್ದರು. 216 ಸದಸ್ಯರಲ್ಲಿ ಬಹುಪಾಲು ಕೆಂಪಣ್ಣ ಗುಂಪಿನ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನ ಗೆದ್ದಿದೆ. ಚುನಾವಣಾಧಿಕಾರಿಯಾಗಿ ಶಿವಕುಮಾರ್ ಕಾರ್ಯನಿರ್ವಹಿಸಿದರು.
ಕೆ.ಮಹದೇವಪ್ಪ, ಎಸ್.ಎಂ. ಸುಬ್ಬಪ್ಪ, ಜಯಶಂಕರಪ್ಪ, ಸೋಮನಾಯಕ, ವೆಂಕಟೇಶ ಸ್ವಾಮಿಗೌಡ, ದೇವನಾಯಕ, ಮಹದೇವಗೌಡ, ಕೃಷ್ಣ, ವೆಂಕಟರಾಮು, ಲೋಕಮಣಿ, ರಾಮಲಿಂಗಯ್ಯ ಸಂಘಕ್ಕೆ ಆಯ್ಕೆಯಾದ ನೂತನ ಸದಸ್ಯರು.