ಮಕ್ಕಳಿಗೆ ಶಿಕ್ಷಣ ಕೊಡಿಸಿ: ಸಿ.ಎಂ. ಇಬ್ರಾಹಿಂ
ಎಚ್.ಡಿ. ಕೋಟೆ: ಮುಸಲ್ಮಾನರು ಶಿಕ್ಷಣ ಪಡೆಯಲು ಮುಂದಾಗಬೇಕು. ಕಿರಿಯ ವಯಸ್ಸಿನಲ್ಲಿಯೇ ತಮ್ಮ ಮಕ್ಕಳನ್ನು ದುಡಿಮೆಗೆ ದೂಡಬಾರದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ತಿಳಿಸಿದರು.
ತಾಲೂಕಿನ ಹ್ಯಾಂಡ್ ಪೋಸ್ಟ್ನಲ್ಲಿ ಪುನರ್ ನಿರ್ಮಾಣವಾದ ಬದರಿಯಾ ಜುಮ್ಮಾ ಮಸೀದಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಸಲ್ಮಾನರೆಲ್ಲ ಸಮಾಜ ಕಂಟಕರಲ್ಲ, ಇಸ್ಲಾಂ ಧರ್ಮವೂ ಸಾಮಾಜಿಕ ನ್ಯಾಯ ಸಾರುತ್ತದೆ. ಜತೆಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಸಹ ಇಸ್ಲಾಂ ಧರ್ಮದ ನೀತಿಯಾಗಿದೆ ಎಂದರು.
ಸಂಸದ ಆರ್.ಧ್ರುವನಾರಾಯಣ್, ಶಾಸಕ ಎಸ್. ಚಿಕ್ಕಮಾದು, ಮಾಜಿ ಶಾಸಕ ಚಿಕ್ಕಣ್ಣ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಏಜಾಜ್ ಪಾಷ, ಮಸೀದಿ ಸಮಿತಿ ಅಧ್ಯಕ್ಷ ಕೆ.ಕೆ. ಯೂಸೂಫ್, ಡಾ. ಅಬ್ದುಲ್ ಹಕೀಂಹಜಾರಿ, ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್, ಮಾಜಿ ಪ್ರದಾನ ಎಂ.ಸಿ. ದೊಡ್ಡನಾಯಕ, ಕೆಪಿಸಿಸಿ ಸದಸ್ಯ ಸುಂದರದಾಸ್, ಸ್ಥಳದಾನಿಗಳಾದ ಶಿವಣ್ಣ, ಇಬ್ರಾಹಿಂ ಇಚ್ಚಾ ಇದ್ದರು.