ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಂಗವೈಭವ ಕಾರ್ಯಕ್ರಮ ಯಶಸ್ವಿ

Vishwanath S
Updated On : 6 Feb 2014, 12:42 pm

ಮೈಸೂರು: ಕನ್ನಡ ಶ್ರೀ ಕಲಾ ವೃಂದದಿಂದ 42ನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ರಂಗ ವೈಭವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಡಾ. ರಾಜ್‌ಕುಮಾರ್, ಡಾ.ಪಿ.ಬಿ. ಶ್ರೀನಿವಾಸ್, ಡಾ.ಸಿ. ಅಶ್ವತ್ಥ್ ಸ್ಮರಣಾರ್ಥ ಏರ್ಪಡಿಸಿದ್ದ ಗೀತಗಾಯನ ಸ್ಪರ್ಧೆಯಲ್ಲಿ ಹಿರಿಯ ಕಲಾವಿದರು ಹಾಗೂ ಕಿರಿಯ ಕಲಾವಿದರು ಭಾಗವಹಿಸಿ ಸಂಪೂರ್ಣ ರಾಮಾಯಣ, ಕುರುಕ್ಷೇತ್ರ, ಶ್ರೀಕೃಷ್ಣಲೀಲ, ದಕ್ಷಯಜ್ಞ, ಭಕ್ತಪ್ರಹ್ಲಾದ, ಶನಿಪ್ರಭಾವ ಮುಂತಾದ ಪೌರಾಣಿಕ ನಾಟಕಗಳ ಪ್ರಸಿದ್ಧ ಗೀತೆಗಳನ್ನು ಪ್ರಸ್ತುತಪಡಿಸಿದರು.
ಈ ಟಿವಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ವಿಜೇತೆ ಅಮೂಲ್ಯ ಸುಮಧುರ ಗೀತ ಸಂಗಮ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಶ್ರೀ ಲಕ್ಷ್ಮೀ ನರಸಿಂಹ ಕೃಪಾ ಪೋಷಿತ ಮಿತ್ರ ಮಂಡಳಿಯ ಕಲಾವಿದರು ಶನಿಪ್ರಭಾವ ಪೌರಾಣಿಕ ನಾಟಕವನ್ನು ಅಭಿನಯಿಸಿದರು. ಹಾರ್ಮೋನಿಯಂ ಮಾಸ್ಟರ್ ಎಚ್.ಪಿ.ನಾಗೇಂದ್ರಪ್ರಸಾದ್, ತಬಲಾ ವಾದಕ ಕಾಳಪ್ಪ ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.
ಕನ್ನಡ ಶ್ರೀ ಕಲಾ ವೃಂದ ಸಂಸ್ಥಾಪಕ ಅಧ್ಯಕ್ಷ ಮೈ.ಮ. ನಾಗರಾಜ್, ಕಾರ್ಯದರ್ಶಿ ಎನ್.ಬಸವೇಗೌಡ, ಸಮಾಜ ಸೇವಕ ಬಿ.ಕುಮಾರ್, ಎಸ್‌ಬಿಎಂ ರವೀಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement