ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ: 6 ಬಂಧನ

Vishwanath S
Updated On : 7 Feb 2014, 1:04 am

ಮೈಸೂರು: ರಿಯಲ್ ಎಸ್ಟೇಟ್ ಏಜೆಂಟ್ ಅನ್ನು ಅಪಹರಿಸಿ 20 ಲಕ್ಷ ರು. ಬೇಡಿಕೆ ಇಟ್ಟಿದ್ದ 6 ಮಂದಿ ಅಪಹರಣಕಾರರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಿರಿದರ್ಶಿನಿ ಬಡಾವಣೆಯ ಪ್ರದೀಪ್‌ಕುಮಾರ್ (26), ಶಿಕ್ಷಕರ ಬಡಾವಣೆಯ ಪ್ರತಾಪ್ (24), ಗಿರಿದರ್ಶಿನಿ ಬಡಾವಣೆಯ ನಾಗೇಂದ್ರ (26), ಆಲನಹಳ್ಳಿ ಬಡಾವಣೆಯ ದೀಪಕ್ (20), ಉದಯಗಿರಿಯ ಸೋಮ (23) ಮತ್ತು ಗುರುಮಲ್ಲಪ್ಪ (21) ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಲೋಕೇಶ್ ಅ. ತರಕಾರಿ ಲೋಕಿ, ಮಂಜುನಾಥ್ ಮತ್ತು ರಘು ಎಂಬವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರೆಸಿದ್ದಾರೆ.
ವಾಯುವಿಹಾರಕ್ಕೆ  ಹೋದವರು ನಾಪತ್ತೆ : ವಿದ್ಯಾರಣ್ಯಪುರಂ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಆದ ಬಿ.ಆರ್. ವಾಸು (54) ಅವರು ಭಾನುವಾರ ಬೆಳಗ್ಗೆ ವಾಕ್ ಹೋಗಿದ್ದಾರೆ. ರಾತ್ರಿ ಫೋನ್ ಮಾಡಿ ಹೊರಗಡೆ ಇರುವುದಾಗಿ, ಮನೆಗೆ ತಡವಾಗಿ ಬರುವುದಾಗಿ ಪತ್ನಿ ಇಂದುಮತಿ ಅವರಿಗೆ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ವಾಸು ಅವರ ಮೊಬೈಲ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ, 20 ಲಕ್ಷ ರು. ಹೊಂದಿಸಿಕೊಳ್ಳುವಂತೆ ಹೇಳಿದ್ದನು. ಈ ಸಂಬಂಧ ಇಂದುಮತಿ ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಹಣ ಪಡೆಯಲು ಬಂದಾಗ ಸಿಕ್ಕರು: ನಿಗದಿಯಂತೆ ಹಣ ಪಡೆಯಲು ಬುಧವಾರ ಸಂಜೆ ನಂಜನಗೂಡು ರಸ್ತೆ ಉತ್ತನಹಳ್ಳಿ ಗೇಟ್ ಬಳಿ ಬಂದ ಪ್ರದೀಪ್‌ಕುಮಾರ್ ಮತ್ತು ಪ್ರತಾಪ್‌ನನ್ನು ಮಾರುವೇಷದಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ನಂತರ ಬಂಧಿತ ಆರೋಪಿಗಳು ನೀಡಿದ ಮಾಹಿತಿ ಅನ್ವಯ ಉತ್ತನಹಳ್ಳಿ ಬಳಿಯ ತೋಟಮೊಂದರಲ್ಲಿ ಅಡಗಿದ್ದ ನಾಗೇಂದ್ರ, ದೀಪಕ್, ಸೋಮ, ಗುರುಮಲ್ಲಪ್ಪ ಎಂಬವರನ್ನು ಸಹ ಪೊಲೀಸರು ಬಂಧಿಸಿಸಲಾಗಿದೆ. ಈ ಕಾರ್ಯಾಚರಣೆ ವೇಳೆಯಲ್ಲಿ ತರಕಾರಿ ಲೋಕಿ, ರಘು ಮತ್ತು ಮಂಜುನಾಥ್ ಪರಾರಿಯಾಗಿದ್ದು, ಶೋಧ ಮುಂದುವರೆಸಲಾಗಿದೆ ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಮಾರುತಿ ಒಮ್ನಿ ವಾಹನ, ಎರಡು ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕೆ.ಆರ್. ಉಪ ವಿಭಾಗದ ಪ್ರಭಾರ ಎಸಿಪಿ ಹಾಗೂ ಅಶೋಕಪುರಂ ಠಾಣೆ ಇನ್ಸ್‌ಪೆಕ್ಟರ್ ಶಾಂತಮಲ್ಲಪ್ಪ, ವಿದ್ಯಾರಣ್ಯಪುರಂ ಠಾಣೆಯ ಇನ್ಸ್‌ಪೆಕ್ಟರ್ ಕೆ.ಸಿ. ಪ್ರಕಾಶ್, ಸಿಸಿಐಬಿ ಇನ್ಸ್‌ಪೆಕ್ಟರ್ ಜಗದೀಶ್, ವಿದ್ಯಾರಣ್ಯಪುರಂ ಠಾಣೆಯ ಎಸ್‌ಐ ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ಸೋಮೇಗೌಡ, ಬೀರಪ್ಪ, ವೀರಭದ್ರಶೆಟ್ಟಿ, ರಂಗಸ್ವಾಮಿ, ಸತೀಶ್, ಎಂ. ರಾಜೇಂದ್ರ, ಗೋಪಾಲ್, ಅಶ್ವತ್ಥಕುಮಾರ್, ಮಹದೇವ್, ಮಹೇಶ್, ರಾಮೇಗೌಡ, ಪ್ರಕಾಶ್, ಹೇಮಂತ್‌ಕುಮಾರ್, ಪ್ರಶಾಂತ್, ಗೋವಿಂದರಾಜು, ಕೆ.ಆರ್. ಉಪ ವಿಭಾಗದ ಅಪರಾಧ ಪತ್ತೆ ದಳ ಸಿಬ್ಬಂದಿ ವೆಂಕಟಾಚಲ, ಕಾಂತರಾಜು, ಮಹದೇವ, ನಿರಂಜನ್, ಮಂಜುನಾಥ, ಅಶೋಕಪುರಂ ಠಾಣೆಯ ಸಿಬ್ಬಂದಿ ಗಿರೀಶ್, ಆನಂದ್, ಸಿಸಿಬಿ ಸಿಬ್ಬಂದಿ ರಮೇಶ್ ಮತ್ತು ವಿಜಯ್‌ಕುಮಾರ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement