ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವೈಭವದ ಅರ್ಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

Vishwanath S
Updated On : 7 Feb 2014, 1:05 am

ಕೆ.ಆರ್. ನಗರ: ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ಅರ್ಕೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ರಥಸಪ್ತಮಿಯ ದಿನವಾದ ಗುರುವಾರ ಅತ್ಯಂತ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಬೆಳಿಗ್ಗೆ 11.50 ರಲ್ಲಿ ಶಾಸಕ ಸಾ.ರಾ. ಮಹೇಶ್ ದಂಪತಿ ಮತ್ತು ಚುನಾಯಿತ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದಿದ್ದ ಭಕ್ತರು ಜೈಕಾರ ಕೂಗಿ ರಥ ಎಳೆದರಲ್ಲದೆ, ಹಣ್ಣು-ಧವನ ಎಸೆದು ಹರಕೆ ತೀರಿಸಿದರು.
ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದು ತರಲಾಯಿತು. ಇದೇ ವೇಳೆ ಹಾಜರಿದ್ದ ಸಾವಿರಾರು ಜನರು ರಥ ಎಳೆದು ಪುನೀತರಾಗಿ ಧನ್ಯತಾಭಾವ ಮೆರೆದು, ದೇವರ ಉತ್ಸವ ಮೂರ್ತಿಯ ದರ್ಶನ ಪಡೆದರು. ರಥೋತ್ಸವದ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಭಕ್ತರು ಕಾವೇರಿ ನದಿಯಲ್ಲಿ ಮಿಂದು ಸರತಿ ಸಾಲಿನಲ್ಲಿ ನಿಂತು ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ದರ್ಶನ ಪಡೆದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪುರಸಭಾ ಸದಸ್ಯರಾದ ಗೀತಾ ಮಹೇಶ್, ಕೆ.ಎಲ್. ಜಗದೀಶ್, ಪಾರ್ವತಿ ನಾಗರಾಜು, ತಾಪಂ ಸದಸ್ಯ ನಾಗಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ತಾ. ಯುವ ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರ ಜೆಡಿಸ್ ಅಧ್ಯಕ್ಷ ಡಿ.ಸಿ. ಮಂಜು, ಮಂಜು, ಕಾಂಗ್ರೆಸ್ ಮುಖಂಡ ರಾಜಾಶ್ರೀಕಾಂತ್, ಚೀರ್ನಹಳ್ಳಿ ಶಿವಣ್ಣ, ನಾಗರಾಜು, ತಹಸೀಲ್ದಾರ್ ಬಿ.ಎನ್. ವೀಣಾ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ಸರ್ವೋದಯ ಪಕ್ಷದ ತಾ. ಅಧ್ಯಕ್ಷ ಗರುಡಗಂಭದಸ್ವಾಮಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement