ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಲಹೆ
ರಾವಂದೂರು: ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮಠಮಾನ್ಯಗಳು ಹೆಚ್ಚಿನ ಗಮನಹರಿಸಬೇಕು ಎಂದು ಡಯಟ್ ಉಪನ್ಯಾಸಕ ಆರ್.ಎಸ್. ದೊಡ್ಡಣ್ಣ ಹೇಳಿದರು.
ಮುರುಘರಾಜೇಂದ್ರ ಶೈಕ್ಷಣಿಕ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರ, ಸರ್ಕಾರವೆಎಲ್ಲ ಸೇವೆಗಳನ್ನು ನಡೆಸಲು ಸಾಧ್ಯವಿಲ್ಲ, ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಸೇರಿ ಅಭಿವೃದ್ದಿಗೆ ಪೂರಕ ವಾತಾವರಣ ನಿರ್ಮಿಸಬೇಕು. ದೇಶದಾದ್ಯಂತ ಶೈಕ್ಷಣಿಕ ಸೇವೆಯಲ್ಲಿ ಖಾಸಗಿ ಸಂಸ್ಥೆಗಳು ಮಹತ್ತರ ಪಾತ್ರವಹಿಸಿದೆ. ಇದು ಸೇವೆಯ ರೂಪದಲ್ಲಿರಬೇಕೆ ವಿನಾ ಸುಲಿಗೆಯಾಗಬಾರದು ಎಂದು ತಿಳಿಸಿದರು.
ತಾ. ಕಸಾಪ ಅಧ್ಯಕ್ಷ ಗೊರಹಳ್ಳಿ ಜಗದೀಶ್ ಮಾತನಾಡಿ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಾಲೆ ಮತ್ತು ಪೋಷಕರ ಪಾತ್ರ ಬಹಳ ಮುಖ್ಯ. ನಾಡು ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸುವ ಕೆಲಸವಾಗಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣದ ಪಠ್ಯಗಳು ಪೂರಕವಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ರಕ್ಷಿತ ಹಾಗೂ 7ನೇ ತರಗತಿ ಹೆಚ್ಚು ಅಂಕ ಪಡೆದ ಯಶವಂತ್ ಅವರನ್ನು ಸನ್ಮಾನಿಸಲಾಯಿತು. ಆರ್.ಟಿ. ಸತೀಶ್, ವಾಣಿಜ್ಯೋದ್ಯಮಿ ಆರ್.ವಿ. ಶಿವಮೂರ್ತಿ, ತಾಪಂ ಸದಸ್ಯ ಆರ್.ಸಿ. ಚಂದ್ರು, ಆಡಳಿತ ಮಂಡಳಿ ಸದಸ್ಯ ಆರ್.ಎಸ್. ಮಹೇಶ್, ಆರ್.ಎಸ್. ಶಶಿಧರ್, ಮುಖ್ಯೋಪಾಧ್ಯಾಯ ಗುರುಸ್ವಾಮಿ ಇದ್ದರು.