ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾ.ಕಚೇರಿ ಮುಂಭಾಗ ಪ್ರತಿಭಟನೆ

Vishwanath S
Updated On : 7 Feb 2014, 11:27 am

ಕ.ಪ್ರ.ವಾರ್ತೆ ,  ಎಚ್.ಡಿ.ಕೋಟೆ ,  ಫೆ. 7
ಪಶ್ಚಿಮ ಘಟ್ಟಗಳ ಕುರಿತು ಕಸ್ತೂರಿ ರಂಗನ್ ನೀಡಿರುವ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದ ರೈತರು ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟಿಸಿ ಉಪ ತಹಸೀಲ್ದಾರ್ ಸಿ. ಪುಟ್ಟಸ್ವಾಮಿ ಅರಿಗೆ ಮನವಿ ಪತ್ರ ಸಲ್ಲಿಸಿದರು.
ಕಸ್ತೂರಿ ರಂಗನ್ ವರದಿ ಆಧರಿಸಿ ತಾಲೂಕಿನ ಸುಮಾರು 64 ಹಳ್ಳಿಗಳ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನವು ಜನ ವಿರೋಧಿಯಾಗಿದೆ. ಅರಣ್ಯದಂಚಿನ ಈ ಜನತೆ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಬದುಕನ್ನು ಕಸಿದುಕೊಳ್ಳುವ ಪರಿಸ್ಥಿತಿಯು ಉಂಟಾಗಿದೆ. ರೈತರಿಗೆ ಹಲವು ಕಾರಣಗಳನ್ನು ನೀಡಿ ಸಾಗುವಳಿ ಪತ್ರಗಳನ್ನು ನೀಡುತ್ತಿಲ್ಲದಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ  ಕೂಡಲೇ ಸಾಗುವಳಿ ಪತ್ರ ನೀಡಬೇಕು. ತಾಲೂಕಿನಲ್ಲಿ ಸುಮಾರು 7 ಸಾವಿರ ಮುಂದಿ ಬಗರ್ ಹುಕುಂ ಭೂ ಸಾಗುವಳಿ ಮಾಡುತ್ತಿದ್ದು, ಶೋಷಣೆಗೆ ಒಳಗಾಗುತ್ತಿದ್ದಾರೆ. ಸಾಗುವಳಿ ಪತ್ರ ಪಡೆಯಲು ಸಾದ್ಯವಾಗದೆ ಕಂಗಾಲಾಗಿದ್ದಾರೆ. ಅರಣ್ಯ ಹಕ್ಕು ಕಾಯಿದೆಯನ್ನು ಈವರೆವಿಗೂ ಅನುಷ್‌ಠಾನಗೊಳಿಸಲು ಸಾಧ್ಯವಾಗಿಲ್ಲ. ಗಿರಿಜನರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹಲವು ಸಮಸ್ಯೆಗಳನ್ನು ತಹಸೀಲ್ದಾರ್ ಗಮನಕ್ಕೆ ತಂದರು.
ಸಂಘದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಶಿವಮ್ಮ, ನಾಗಪ್ಪ, ಬಸವರಾಜಪ್ಪ, ಅಕ್ಬರ್ ಪಾಷ, ವೆಂಕಟರಮಣ, ಶ್ರೀನಿವಾಸಮೂರ್ತಿ, ನಾಗರಾಜಪ್ಪ, ಕೃಷ್ಣನಾಯಕ, ಲಿಂಗೇಗೌಡ, ಕಾಳೇಗೌಡ, ಮಹದೇವಶೆಟ್ಟಿ, ಪಾಪನಾಯಕ, ಬಸವನಾಯಕ, ಕರಿಗೌಡ, ನಾಗರಾಜು, ಗಣೇಶ್, ಮಲ್ಲೇಶ್, ಗೋಪಾಲಯ್ಯ, ಪಾಪನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement