ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ ನೀಡುವಂತೆ ಕೆ. ಕೆಂಡಗಣ್ಣ ಮನವಿ

Vishwanath S
Updated On : 9 Feb 2014, 12:50 pm

ಮೈಸೂರು: ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಫೆ. 14 ರಂದು ಮಂಡಿಸುವ ಬಜೆಟ್‌ನಲ್ಲಿ ವಿಶ್ವಕರ್ಮ ಸಮಾಜದವರ ಏಳಿಗೆಗಾಗಿ ಆದ್ಯತೆ ನೀಡಿ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಕೆಂಡಗಣ್ಣ ಮನವಿ ಮಾಡಿದರು.
ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿಶ್ವಕರ್ಮ ನಿಗಮ ಸ್ಥಾಪನೆಗೆ ರು.5 ಕೋಟಿ ಮೀಸಲಿಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೇ ರೀತಿ ವಿಳಂಬ ಮಾಡಿದರೆ ವಿಶ್ವಕರ್ಮರಿಗೆ ಹಿನ್ನಡೆಯಾಗುತ್ತದೆ. ಮೀಸಲಿಟ್ಟಿರುವ ರು.5 ಕೋಟಿ ಮೊತ್ತವನ್ನು ರು. 50 ಕೋಟಿ ಗೆ ಹೆಚ್ಚಿಸಬೇಕು ಎಂದು  ಶನಿವಾರ ಆಗ್ರಹಿಸಿದರು.
ರಾಜ್ಯಾದ್ಯಂತ ಸುಮಾರು 35 ಲಕ್ಷ ಜನಸಂಖ್ಯೆಯುಳ್ಳ ವಿಶ್ವಕರ್ಮರಿಗೆ ಮುಂದಿನ ದಿನಗಳಲ್ಲಿ ವಿಧಾನಸಭೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳು ವಿಶ್ವಕರ್ಮರ ಬಗ್ಗೆ ದನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.   
ಪದಾಧಿಕಾರಿಗಳಾದ ಟಿ.ಎಸ್. ಲೋಕೇಶ್, ಮಂಜು, ಉಮೇಶ್, ನಾಗೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement