ಶಿಕ್ಷಣಕ್ಕೆ ಒತ್ತು ನೀಡಲು ಒತ್ತಾಯ
ಮೈಸೂರು: ಪ್ರಜಾಪ್ರಭುತ್ವದ ಯಶಸ್ಸಿಗೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೂಲ ಸೂತ್ರವೆಂದರೆ ಶಿಕ್ಷಣ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2014-15ನೇ ಸಾಲಿನ ಬಜೆಟ್ನಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಅಖಿಲ ಕರ್ನಾಟಕ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಕೆ.ಸಿ. ಪುಟ್ಟಸಿದ್ದಶೆಟ್ಟಿ ಒತ್ತಾಯಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಯುಪಿಎ ಸರ್ಕಾರ ಕಳೆದ ಸಾಲಿನ ಬಜೆಟ್ನಲ್ಲಿ ಆರ್ಟಿಇ, ಸರ್ವಶಿಕ್ಷಣ ಅಭಿಯಾನಕ್ಕೆ 27,258 ಕೋಟಿ ರು. ನೀಡಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನಕ್ಕೆ ಶೇ. 27 ರಷ್ಟು ಹೆಚ್ಚಳ ಮಾಡಿ ರು. 2983 ಕೋಟಿ ನೀಡಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರು. 12,215 ಕೋಟಿ ಮತ್ತು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಿದ್ದರೂ ಕೂಡ ಶೇ. 6 ಜಿಡಿಪಿ, ಅಲೋಕೇಶನ್ ಮಾಡುವುದಲ್ಲಿ ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ನಲ್ಲಿ ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಶೇ. 6 ಮೊತ್ತವನ್ನು ಶಿಕ್ಷಣಕ್ಕೆ ಒದಗಿಸಬೇಕು ಎಂದು ಕೋರಿದರು. ಪದಾಧಿಕಾರಿಗಳಾದ ಎಂ.ಆರ್. ರಾಮಕೃಷ್ಣಗೌಡ, ಬಿ.ಕೆ. ಲೋಕೇಶ್ ಇದ್ದರು.
ಗೂಡ್ಸ್ ಆಟೋ ಕಳವು: ಆರೋಪಿ ಸೆರೆ
ಮೈಸೂರು: ಚಾಮರಾಜನಗರದಲ್ಲಿ ಗೂಡ್ಸ್ ಆಟೋ ಕಳವು ಮಾಡಿ ಮೈಸೂರಿನಲ್ಲಿ ಓಡಿಸುತ್ತಿದ್ದ ವ್ಯಕ್ತಿಯನ್ನು ವಿಜಯನಗರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಮೈಸೂರು ತಾಲೂಕು ಬೆಲವತ್ತ ನಿವಾಸಿ ಶ್ರೀನಿವಾಸ್ (28) ಬಂಧಿತ ಆರೋಪಿ. ಶ್ರೀನಿವಾಸ್ ಸೇರಿದಂತೆ ಮೂವರು ಚಾಮರಾಜನಗರ ಪಟ್ಟಣದಲ್ಲಿ ಗೂಡ್ಸ್ ಆಟೋವನ್ನು ಕಳೆದ ತಿಂಗಳು ಕಳವು ಮಾಡಿದ್ದರು. ಈ ಸಂಬಂಧ ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವು ಮಾಡಿದ್ದ ಆಟೋವನ್ನು ಶ್ರೀನಿವಾಸ್ ಓಡಿಸಿಕೊಂಡಿದ್ದ. ವಿಜಯನಗರ ವರ್ತುಲ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಕಳವು ಮಾಡಿದ್ದ ಆಟೋ ಸಘುತ ಆರೋಪಿ ಶ್ರೀನಿವಾಸ್ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಸಿ.ವಿ. ರವಿ, ಎಸ್ಐ ರಘುಪ್ರಸಾದ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಶಾಸಕ ಎಂಕೆಎಸ್ ಹುಟ್ಟುಹಬ್ಬ ಆಚರಣೆ
ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪಾಲಿಕೆ ಸದಸ್ಯ ಸುನಿಲ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಜನರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರಿಗೆ ಮಾಸಾಶನ ವಿತರಿಸಲಾಯಿತು. ಬ್ಲಾಕ್ ಅಧ್ಯಕ್ಷ ಸೋಮಶೇಖರ್, ಸತ್ಯಪ್ಪ, ಪ್ರಭಾಕರ್, ಸಿದ್ದಲಿಂಗಣ್ಣ ನೇತೃತ್ವದಲ್ಲಿ ಇಟ್ಟಿಗೆಗೂಡು ಕರಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ವಿದ್ಯಾರಣ್ಯಪುರಂನ 20ನೇ ತಿರುವಿನಲ್ಲಿರುವ ಚಿಣ್ಣರ ಚಿಗುರು ಟೇಕ್ ಕೇರ್ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.ಜೆ.ಪಿ. ನಗರ ಗೊಬ್ಬಳಿ ಮರ ವೃತ್ತದಲ್ಲಿ ಶೇಖರ್ ನೇತೃತ್ವದಲ್ಲಿ ಮಹಿಳೆಯ ಸೀರೆ ವಿತರಿಸಲಾಯಿತು. ನಾಗರಾಜು ಮತ್ತು ಸೋಮೇಗೌಡರು ಪುಟ್ಟೀರಮ್ಮ ಶಾಲೆಯ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ಮನೋಜ್, ಎಂ.ಸಿ. ರಮೇಶ್ ಪಿ. ವೆಂಕಟರಮಣ ನಾಮಫಲಕ ಹೊಸದಾಗ ಬರೆಸಿ ವಿತರಿಸಲಾಯಿತು. ಬ್ಲಾಕ್ ಅಧ್ಯಕ್ಷ ರೂಪೇಶ್, ಮಣಿ ನೇತೃತ್ವದಲ್ಲಿ ಸೀರೆ ವಿತರಿಸಲಾಯಿತು.
ಪಶ್ಚಿಮವಾಹಿನಿಯಲ್ಲಿ ಸರ್ವೋದಯ ಮೇಳ
ಮೈಸೂರು: ಮೈಸೂರು ವಿವಿ ಗಾಂಧಿ ಭವನ ಹಾಗೂ ಕಲ್ಯಾಣ ಫಾರ್ಮಸಿ ಸಂಸ್ಥೆಗಳು ಫೆ. 10 ರಿಂದ 12 ರವರೆಗೆ ಶ್ರೀರಂಗಪಟ್ಟಣದ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ವೋದಯ ಮೇಳ ಆಯೋಜಿಸಿವೆ. ಮೇಳದ ಅಧ್ಯಕ್ಷತೆಯನ್ನು ಸಂವಿಧಾನ ತಜ್ಞ ಡಾ. ಸಿ.ಕೆ.ಎನ್. ರಾಜ ವಹಿಸಲಿದ್ದು, ಫೆ. 10 ರಂದು ಗಾಂಧಿ ವಿಚಾರದ ಚೌಕಟ್ಟಿನಲ್ಲಿ ಮುಕ್ತ ಚರ್ಚೆ, ಕಳೆದ ವರ್ಷದ ಮೇಳಧ ವರದಿ ಮತ್ತು ಲೆಕ್ಕಪತ್ರ, ಪ್ರಾರ್ಥನೆ, ಫೆ. 11 ರಂದು ಸ್ನಾನ, ಸ್ವಚ್ಛತೆ ಪ್ರಾರ್ಥನೆ, ಸರಳ ಜೀವನ ಮತ್ತು ಶ್ರಮ ಸಂಸ್ಕೃತಿ, ಮಹಿಳೆಯರ ಸ್ವಾತಂತ್ರ್ಯ- ಸಂದಿಗ್ಧತೆಗಳು ಕುರಿತ ವಿಚಾರ ಮಂಡನೆ, ಫೆ. 12 ರಂದು ಸಮಕಾಲೀನ ಬದುಕಿನ ಸವಾಲುಗಳು- ಸರ್ವೋದಯದ ತತ್ವಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಾಗುತ್ತದೆ.
ಪ್ರತಿಭಾವಂತರಿಗೆ ಪುರಸ್ಕಾರ
ಮೈಸೂರು: ವರುಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಂದ ಪುರಸ್ಕಾರಕ್ಕೆ ಪಾತ್ರರಾದರು. ದ್ವಿತೀಯ ಪಿಯು ವಿದ್ಯಾರ್ಥಿನಿಯರಾದ ಕೆ. ಅನಿತಾ ಹಾಗೂ ಎಸ್. ಪ್ರೇಮಾ ಗೌರವಕ್ಕೆ ಪಾತ್ರರಾದವರು. ಇವರಿಬ್ಬರು ವರುಣ ಗ್ರಾಮದ ಬಡ ಕುಟುಂಬಕ್ಕೆ ಸೇರಿದವರು. ಸುತ್ತೂರಿಗೆ ಶನಿವಾರ ತೆರಳುತ್ತಿದ್ದ ಸಚಿವರು, ಮಾರ್ಗ ಮಧ್ಯದಲ್ಲಿರುವ ವರುಣ ಸರ್ಕಾರಿ ಪದವಿ ಕಾಲೇಜೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಕಾರಣ, ಅವರಿಬ್ಬರನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು ವೇದಿಕೆಯಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಿದರು.
ನಾನು ಅಭ್ಯರ್ಥಿಯಲ್ಲ: ರಾಮದಾಸ್
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ನಾನು ಬಿಜೆಪಿ ಅಭ್ಯರ್ಥಿಯಲ್ಲ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಶನಿವಾರ ನಮೋ ಟೀ ಸ್ಟಾಲ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನಾನಂತೂ ಅಭ್ಯರ್ಥಿಯಲ್ಲ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರ ಜಯಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಟೆಂಪೋ ಡಿಕ್ಕಿ: ಕುಣಗಳ್ಳಿಯ ವೃದ್ಧ ಸಾವು
ಗುಂಡ್ಲುಪೇಟೆ: ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ ಶನಿವಾರ ಸಂಜೆ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಹಂಗಳ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಕುಣಗಳ್ಳಿ ಗ್ರಾಮದ ಬೆಳ್ಳಯ್ಯ(70) ಹಂಗಳ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದು, ತೀವ್ರ ಗಾಯಗೊಂಡಿದ್ದ ಬೆಳ್ಳಯ್ಯನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗುಂಡ್ಲುಪೇಟೆ ಪಿಎಸ್ಐ ಎಂ.ನಾಯಕ್ ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೂಡ್ಸ್ ಆಟೋ ಕಳವು : ಆರೋಪಿ ಸೆರೆ
ಮೈಸೂರು: ಚಾಮರಾಜನಗರದಲ್ಲಿ ಗೂಡ್ಸ್ ಆಟೋ ಕಳವು ಮಾಡಿ ಮೈಸೂರಿನಲ್ಲಿ ಓಡಿಸುತ್ತಿದ್ದ ವ್ಯಕ್ತಿಯನ್ನು ವಿಜಯನಗರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಮೈಸೂರು ತಾಲೂಕು ಬೆಲವತ್ತ ನಿವಾಸಿ ಶ್ರೀನಿವಾಸ್ (28) ಬಂಧಿತ ಆರೋಪಿ. ಶ್ರೀನಿವಾಸ್ ಸೇರಿದಂತೆ ಮೂವರು ಚಾಮರಾಜನಗರ ಪಟ್ಟಣದಲ್ಲಿ ಗೂಡ್ಸ್ ಆಟೋವನ್ನು ಕಳೆದ ತಿಂಗಳು ಕಳವು ಮಾಡಿದ್ದರು. ಈ ಸಂಬಂಧ ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವು ಮಾಡಿದ್ದ ಆಟೋವನ್ನು ಶ್ರೀನಿವಾಸ್ ಓಡಿಸಿಕೊಂಡಿದ್ದ. ವಿಜಯನಗರ ವರ್ತುಲ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಕಳವು ಮಾಡಿದ್ದ ಆಟೋ ಸಘುತ ಆರೋಪಿ ಶ್ರೀನಿವಾಸ್ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಸಿ.ವಿ. ರವಿ, ಎಸ್ಐ ರಘುಪ್ರಸಾದ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.