ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಚೆ ನೌಕರರ ಮುಷ್ಕರ ಆರಂಭ

Vishwanath S
Updated On : 13 Feb 2014, 1:13 am

ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಚೆ ನೌಕರರು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ.
ಅಂಚೆ ನೌಕರರ ಒಕ್ಕೂಟವು ವಿವಿಧ ಸಂಘಟನೆಗಳೊಂದಿಗೆ ಒಗ್ಗೂಡಿ 48 ಗಂಟೆಗಳ ರಾಷ್ಟ್ರವ್ಯಾಪಿ ಅಂಚೆ ನೌಕರರ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅಶೋಕ ರಸ್ತೆಯ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಎದುರು ಅಂಚೆ ನೌಕರರು ಜಮಾಯಿಸಿ ಪ್ರತಿಭಟಿಸಿದರು. ಶೇ.50 ತುಟ್ಟಿಭತ್ಯೆ ವಿಲೀನಗೊಳಿಸಬೇಕು. ಮಧ್ಯಂತರ ಪರಿಹಾರ ನೀಡಬೇಕು. 7ನೇ ವೇತನ ಆಯೋಗವನ್ನು 2014ರ ಜ.1ರಿಂದ ಜಾರಿಗೊಳಿಸಬೇಕು. ಗ್ರಾಮೀಣ ಅಂಚೆ ನೌಕರರನ್ನು 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಬೇಕು. ಹೊಸ ಪಿಂಚಣಿ ನೀತಿ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಹಂಗಾಮಿ, ಅರೆಕಾಲಿಕ ನೌಕರರ ವೇತನ ಪರಿಷ್ಕರಿಸಬೇಕು. 6ನೇ ವೇತನ ಆಯೋಗದ ವೇತನ ತಾರತಮ್ಯ ನಿವಾರಿಸಬೇಕು. ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಬೇಕು. ಎಲ್ಲ ನೌಕರರಿಗೂ 5 ಮುಂಬಡ್ತಿ ನೀಡಬೇಕು. ಅನುಕಂಪ ಆಧಾರಿತ ನೌಕರರಿಗೆ ಕಾನೂನು ತಿದ್ದುಪಡಿ ಮಾಡಬೇಕು. ಗ್ರಾಮೀಣ ಅಂಚೆ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಅಂಚೆ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಸಂತಕುಮಾರ್, ಸಿ.ಆರ್. ದೀನಬಂಧು, ಮೈಲಾರಪ್ಪ, ಶಿವಶಂಕರರಾವ್, ಎಚ್.ಎಸ್. ನಾಗರಾಜ್, ಎನ್. ಕೃಷ್ಣ, ಮುರಳೀಧರ್, ವೆಂಕಟೇಶ್, ಸುಬ್ರಮಣ್ಯ, ಆರ್. ಮಹದೇವ, ಸುಂದರಯ್ಯ, ಕೃಷ್ಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement