ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಲಿತರ ಬದುಕಿನ ಮುನ್ನೋಟದ ಚರ್ಚೆಯಾಗಲಿ

Vishwanath S
Updated On : 13 Feb 2014, 1:12 am

ಮೈಸೂರು: ದಲಿತರ ಬದುಕಿನ ಮುನ್ನೋಟ ಹಾಗೂ ದಲಿತ ಚಳವಳಿಯ ಪ್ರಾಮುಖ್ಯತೆ ಬಗ್ಗೆ ಚರ್ಚೆ ನಡೆಸಿ ಯುವಕರಿಗೆ ಅರಿವು ಮೂಡಿಸುವಂತೆ ಜಾನಪದವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.
ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ದಸಂಸ ಪ್ರಥಮ ಅಧ್ಯಕ್ಷರಾದ ದಿ. ಎನ್.ಗಿರಿಯಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರ ಬಗ್ಗೆ ಕಾಳಜಿ ಹೊಂದಿರುವ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಸಾಹಿತಿಗಳು ಆ ಕಾಲದಲ್ಲಿ ಹೋರಾಟ ನಡೆಸಿದರು. ಅದರಲ್ಲೂ ಎನ್. ಗಿರಿಯಪ್ಪ ಮತ್ತು ಕೃಷ್ಣಪ್ಪ ಅವರ ಹೋರಾಟ ಸ್ಮರಣೀಯ. ಅಂಥವರ ಬಗ್ಗೆ ಈಗಿನ ಯುವಕರಿಗೆ ತಿಳಿಸುವ ಅಗತ್ಯವಿದೆ. ಈ ಎರಡು ಅಧ್ಯಯನ ಕೇಂದ್ರಗಳು ಇಂಥವರ ಬಗ್ಗೆ ಪುಸ್ತಕ ಹೊರ ತರಬೇಕು. ಹದಿಹರೆಯದಲ್ಲಿ ತುಂಬುವ ಒಳ್ಳೆಯ ವಿಚಾರಗಳು ಕೊನೆ ತನಕ ಉಳಿಯುವುದರಿಂದ ಯುವಕರಿಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು.
ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ಪ್ರಾಧ್ಯಾಪಕ ಪ್ರೊ.ಕೆ.ಸಿ. ಬಸವರಾಜು, ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಮೈಲಹಳ್ಳಿ ರೇವಣ್ಣ, ಮುಖಂಡರಾದ ಲಕ್ಷ್ಮಣ ಹೊಸಕೋಟೆ, ಲೋಕೇಶ್, ಹರಿಹರ ಆನಂದಸ್ವಾಮಿ, ಮಲ್ಲೇಶ್ ಚುಂಚನಹಳ್ಳಿ, ನಿಂಗರಾಜು ಮಲ್ಲಾಡಿ, ಎಸ್.ತುಕಾರಾಮ್ ಇದ್ದರು.
ಎಷ್ಟೋ ಜನರಿಗೆ ಎನ್.ಗಿರಿಯಪ್ಪ ಯಾರು ಎಂಬುದೇ ಗೊತ್ತಿಲ್ಲ. ದಸಂಸದಲ್ಲಿ ಮುಂಚೂಣಿಯಲ್ಲಿ ನಿಂತ ಹೋರಾಟವನ್ನು ತಿಳಿದುಕೊಳ್ಳಬೇಕೆಂದರೆ ಹೋರಾಟ ನಡೆಸಿದ ವ್ಯಕ್ತಿಗಳನ್ನು ಕಳೆದುಕೊಳ್ಳಬೇಕೇ? ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ದಂಸಸ ಮತ್ತೆ ಒಗ್ಗೂಡಬೇಕು.
 ಲೋಕೇಶ್, ದಲಿತ ಮುಖಂಡ.
ಹೋರಾಟ ಮನೋಭಾವ ಇಟ್ಟುಕೊಂಡರೂ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಾವೆಲ್ಲ ಹಾಸ್ಟೆಲ್‌ಗೆ ಭೇಟಿ ಕೊಡುವುದನ್ನು ಬಿಟ್ಟಿದ್ದೇವೆ. ಹಾಗಾಗಿ ದಲಿತ ವಿಚಾರಗಳಿಂದ ವಿದ್ಯಾರ್ಥಿಗಳು ದೂರ ಉಳಿದಿದ್ದಾರೆ.
 ಲಕ್ಷ್ಮಣ ಹೊಸಕೋಟೆ, ದಲಿತ ಮುಖಂಡ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement