ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಲುಬಾಯಿ ಜ್ವರ; ಲಸಿಕಾ ಕಾರ್ಯಕ್ರಮ

Vishwanath S
Updated On : 14 Feb 2014, 12:17 pm

ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಜಾನುವಾರಿಗೆ ಕಾಲುಬಾಯಿ ಜ್ವರದ ವಿರುದ್ಧ ಉಚಿತವಾಗಿ ಲಸಿಕಾ ಕಾಯಕ್ರಮವನ್ನು ಫೆ.15ರಿಂದ ಹಮ್ಮಿಕೊಳ್ಳಲಾಗಿದೆ.
ರೈತ ಬಾಂಧವರು ಮೂರು ತಿಂಗಳ ಮೇಲ್ಪಟ್ಟ ಎಲ್ಲ ಹಸು, ಎಮ್ಮೆ, ಹಂದಿಗಳಿಗೆ ಲಸಿಕೆ ಹಾಕಿಸಿಕೊಂಡು ಜಾನುವಾರನ್ನು ಕಾಲುಬಾಯಿ ಜ್ವರದಿಂದ ರಕ್ಷಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ದೇವದಾಸ್ ಕೋರಿದ್ದಾರೆ.
ಫೆ.15ರಂದು ಗೆಜ್ಜಗಳ್ಳಿ, ಕುಪ್ಪಲೂರು, ಗೊರೂರು, ಎಡಹಳ್ಳಿ, ಹಾರೋಹಳ್ಳಿ, ಇಲವಾಲ, ನಾಗವಾಲ, ಮಲ್ಲಹಳ್ಳಿ, ಕುಮಾರಬೀಡು, ಗೋಹಳ್ಳಿ, ನುಗ್ಗಳ್ಳಿ, ಶೆಟ್ಟನಾಯಕನಹಳ್ಳಿ. ಫೆ.16ರಂದು ಲಿಂಗಾಂಬುದಿಪಾಳ್ಯ, ಬಂಡೀಪಾಳ್ಯ, ಶ್ರೀರಾಂಪುರ, ಕಳಲವಾಡಿ, ತಳೂರು, ಹಾರೋಹಳ್ಳಿ, ದೊಡ್ಡಹುಯಿಲಾಳು, ಮೈದನಹಳ್ಳಿ, ಮೇಗಳಾಪುರ, ಮಲ್ಲಹಳ್ಳಿ, ಕುಮಾರಬೀಡು, ಗೋಹಳ್ಳಿ, ನುಗ್ಗಳ್ಳಿ, ಶೆಟ್ಟನಾಯಕನಹಳ್ಳಿ, ಫೆ.17ರಂದು ಉದ್ಬೂರು, ಮುರಡಗಳ್ಳಿ, ಹಾರೋಹಳ್ಳಿ, ದೊಡ್ಡಹುಯಿಲಾಳು, ಮೈದನಹಳ್ಳಿ, ಮೇಗಳಾಪುರ, ಮಾದಳ್ಳಿ. ಫೆ.18ರಂದು ದೂರ, ಭುಗತಗಳ್ಳಿ, ವಾಜಮಂಗಲ, ಕ್ಯಾತಮಾರನಹಳ್ಳಿ, ರಾಘವೇಂದ್ರನಗರ, ಬೊಮ್ಮನಹಳ್ಳಿ. ಫೆ.19 ಮಾರ್ಬಳ್ಳಿ, ನಜರಾಬಾದ್, ಗುಂಗ್ರಾಲ್ ಛತ್ರ, ರಟ್ಟನಹಳ್ಳಿ, ಯಲಚನಹಳ್ಳಿ, ಬಲ್ಲಹಳ್ಳಿ, ಕೆ.ಹೆಮ್ಮನಹಳ್ಳಿ, ಮಾದಿಗಹಳ್ಳಿ, ಮರಟಿಕ್ಯಾತನಹಳ್ಳಿ, ಜಟ್ಟಿಹುಂಡಿ.
ಫೆ.20ರಂದು ಟಿ. ಕಾಟೂರು, ಕೆಲ್ಲಹಳ್ಳಿ, ದೊಡ್ಡಕಾಟೂರು, ಯಡಕೊಳ, ಗುಂಗ್ರಾಲ್ :ತ್ರ, ರಟ್ಟನಹಳ್ಳಿ, ಯಲಚನಹಳ್ಳಿ, ಬಲ್ಲಹಳ್ಳಿ, ಕೆ. ಹೆಮ್ಮನಹಳ್ಳಿ, ಮಾದಿಗಹಳ್ಳಿ, ಮರಟಿಕ್ಯಾತನಹಳ್ಳಿ, ಜಟ್ಟಿಹುಂಡಿ. ಫೆ.21ರಂದು ಧನಗಳ್ಳಿ, ಯಡಕೊಳ, ದಡದಕಲ್ಲಹಳ್ಳಿ, ಎಸ್. ಹೆಮ್ಮನಹಳ್ಳಿ, ದೊಡ್ಡಮಾರಗೌಡನಹಳ್ಳಿ. ಫೆ. 22ರಂದು ಧನಗಳ್ಳಿ, ಕುಪ್ಪೇಗಾಲ, ಹೊಸಹಳ್ಳಿ, ಕಲ್ಲೂರು, ದೊಡ್ಡಮಾರಗೌಡನಹಳ್ಳಿ. ಫೆ. 23ರಂದು ನಗರ್ತಹಳ್ಳಿ, ಕೆಂಚಲಗೂಡು, ಜಯಪುರ, ಅರಸಿನಕೆರೆ, ಕೀಳನಪುರ, ಮೇಗಳಾಪುರ, ಮಾಧವಗೆರೆ, ಹುಂಡವಾಡಿ, ಆನಂದೂರು, ಯಡಹಳ್ಳಿ, ಕಮರಹಳ್ಳಿ, ಮಾಣಿಕ್ಯಪುರ.  ಹತ್ತಿರದ ಪಶುವೈದ್ಯ ಸಂಸ್ಥೆಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement