ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮೀಣ ಅಭಿವೃದ್ಧಿಯೇ ದೇಶದ ಅಭಿವೃದ್ಧಿ

Vishwanath S
Updated On : 14 Feb 2014, 12:17 pm

ಮೈಸೂರು: ಶೋಷಿತ ವರ್ಗದ ಹೆಣ್ಣು ಮಕ್ಕಳು ಈಗ ಹೆಚ್ಚಿನ ಪ್ರಮಾಣದಲ್ಲಿ ಪದವಿ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ತಾಲೂಕಿನ ಕಡಕೊಳದಲ್ಲಿ ನಡೆದ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕ 2013-14ನೇ ಸಾಲಿನ ಮೈಸೂರು ವಿವಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಉತ್ತಮರ ಸಹವಾಸ, ಕಾಯಕ, ಪುಸ್ತಕ, ಅನುಭವಗಳೇ ಉತ್ತಮ ಶಿಕ್ಷಣ ಎಂದರು.
ಗ್ರಾಮೀಣ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಆದ್ದರಿಂದ ಗ್ರಾಮಗಳ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ಅತಿ ಅವಶ್ಯಕ.
ಈ ಯೋಜನೆಯಲ್ಲಿ ತೊಡಗಿರುವ ಸ್ವಯಂ ಸೇವಕರು ಗ್ರಾಮೀಣರ ವಿವಿಧ ಸಮಸ್ಯೆಗಳಾದ ಬಡತನ, ಅನಕ್ಷರತೆ, ನಿರುದ್ಯೋಗ ಮೊದಲಾದ ಸಮಸ್ಯೆಗಳ ನಿವಾರಣೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣೆ, ಸ್ವಚ್ಛತೆ ಮತ್ತು ಗ್ರಾಮೀಣ ಜನತೆಯ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಜಿಪಂ ಸದಸ್ಯ ಪಟೇಲ್ ಜವರೇಗೌಡ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಎಂ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಪ್ರೊ. ಮನೋನ್ಮಣಿ, ನೀಲಾಸಿದ್ದಪ್ಪ, ನಾಗರಾಜು, ಶ್ರೀಕಂಠು, ಮಹೇಶ್, ಕೆ.ಆರ್. ಮಹದೇವು, ಸ್ವಾಮಿನಾಯಕ, ಕಪನಿಗೌಡ, ಮೊಂಡನಾಯಕ, ರಂಗಪ್ಪ, ರಮೇಶ್ ಇದ್ದರು. ಡಾ. ಪುಟ್ಟರಾಜು ಸ್ವಾಗತಿಸಿದರು. ಡಾ. ಹೇಮಚಂದ್ರ ವಂದಿಸಿದರು. ಶಭಾನ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement