ನಾಳೆ ವಿವಿಧ ಕೊ- ಆಪರೇಟಿವ್ ಸೊಸೈಟಿಗಳ ಚುನಾವಣೆ
ಮೈಸೂರು: ನಗರದ ವಿವಿಧ ಕೋ- ಆಪರೇಟಿವ್ ಸೊಸೈಟಿಗಳಿಗೆ ಫೆ.16ರಂದು ಚುನಾವಣೆ ನಡೆಯಲಿದ್ದು ಸ್ಪರ್ಧಾಳುಗಳಿಂದ ಅಂತಿಮ ಹಂತದ ಪ್ರಚಾರ ವೇಗದಿಂದ ಸಾಗಿದೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಕೋ- ಆಪ್ ಸೊಸೈಟಿಗೆ ಸಿ.ವಿ. ಮೋಹನ್‌ಕುಮಾರ್ ಮತ್ತು ಸಿ.ಡಿ. ವಿಶ್ವನಾಥ್ ತಂಡ ಸ್ಪರ್ಧಿಸಿದ್ದು, ಸೊಸೈಟಿಯ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ. ಇವರ ಜತೆ ಕೆ.ಎಸ್. ರಾಮಚಂದ್ರ, ಎಂ.ಕೃಷ್ಣ, ಕೆ.ವಿಶ್ವನಾಥ್ ಸಿಂಗ್, ಕ್ರಿಸ್ಟಫರ್ ಗೀಲೋಬ, ಬಿ.ಕೆ. ಧರ್ಮರಾಜ್, ಬಿ.ಎನ್.ಚಿದಾನಂದ, ಐ.ಎಸ್. ಚಿನ್ನಪ್ಪ, ಎಲ್. ಶಿವರಾಮು, ಆಮ್ಜದ್ ಖಾನ್, ಬಿ.ಆರ್. ನಂಜುಂಡೇಶ್ವರ, ಸಿ. ರಾಜೇಂದ್ರ, ಜಿ. ನಂದಿನಿ, ಜಿ. ನೇತ್ರಾವತಿ ಸ್ಪರ್ಧಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌ಕುಮಾರ್, ಈಗಿನ ಪದಾಧಿಕಾರಿಗಳು ಸೊಸೈಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ನಿವೇಶನ ಕೊಡಿಸುತ್ತೇನೆ ಎಂದು ಹೇಳಿ ಸದಸ್ಯರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಮಿಕರು ಮೃತಪಟ್ಟಲ್ಲಿ ಅವರಿಗೆ ಹಣ ತಲುಪಿಸುತ್ತಿಲ್ಲ. ಆದ್ದರಿಂದ ತಮ್ಮ ತಂಡವನ್ನು ಗೆಲ್ಲಿಸಿದಲ್ಲಿ ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದರು.
ಗಿರಿಗೌಡ ಸ್ಪರ್ಧೆ: ದಿ ಗ್ರಾಜ್ಯುಯೇಟ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ಮತ್ತು ಗುರುಬಸಪ್ಪ ಸ್ಪರ್ಧಿಸಿದ್ದು ಇವರಿಗೆ ಮತ ನೀಡುವಂತೆ ಕೋರಲಾಗಿದೆ. ಸದಸ್ಯರಾದ ಪ್ರೊ.ಎಸ್. ದ್ವಾರಕಿ, ಎಂ. ರಾಮೇಗೌಡ, ಎ. ಸಂಗಪ್ಪ, ಎಸ್.ಪಾರ್ಶ್ವನಾಥ್, ಎಚ್.ವಿ.ಮುರುಳೀಧರ, ಅಶೋಕ್‌ಕುಮಾರ್ ಬೆಂಬಲ ಸೂಚಿಸಿದ್ದಾರೆ.
ರಾಧಾ, ಗೌರಮ್ಮ ಮತ್ತು ತಂಡ: ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತಕ್ಕೆ ಬಿ. ರಾಧಾ ಮತ್ತು ತಂಡದವರು ಸ್ಪರ್ಧಿಸಿದ್ದಾರೆ. ಮೀನಾ ತೂಗುದೀಪ, ಸುನಂದಮ್ಮ ಲಕ್ಕಣ್ಣ, ಮೋದಾಮಣಿ, ಸೌಭಾಗ್ಯ ಮೂರ್ತಿ, ಜೆ.ಪಿ. ಲಲಿತಾಕ್ಷಿ, ಎಸ್.ಎನ್. ವೀಣಾ, ಎಚ್.ಆರ್. ಲೀಲಾವತಿ, ವಿಜಯ, ಎಂ.ಎಸ್. ಸುಧಾಮಣಿ, ಆಶಾಗಂಗಾ, ಚಂದ್ರಮತಿ, ನಾಗರತ್ನಮ್ಮ, ಎಂ. ರಮಾದೇವಿ, ಕೃಷ್ಣವೇಣಿ, ಸೀಮಾ ತಹಸೀನ್ ಸುಲ್ತಾನ, ಗಾಯತ್ರಿ ನಾರಾಯಣಗೌಡ ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ನಮ್ಮ ತಂಡವನ್ನು ಗೆಲ್ಲಿಸುವಂತೆ ಬಿ. ರಾಧಾ ಮತದಾರರನ್ನು ಕೋರಿದ್ದಾರೆ.
ತಮ್ಮ ನೇತೃತ್ವದಲ್ಲಿ ಸ್ಪರ್ಧಿಸಿರುವ ಮಂಜುಳ ಮಾನಸ, ಗೀತಾ ಪುಟ್ಟಸ್ವಾಮಿ, ಎಸ್. ಪ್ರೇಮಾ, ಎಂ. ಪೂರ್ಣಿಮಾ, ಬಿ. ಪೂರ್ಣಿಮಾ, ಜೆ.ಮಾಲತಿ, ಕೆ.ಜಿ.ನಂಜಮ್ಮ, ಜೆ.ಆರ್.ಪುಷ್ಪಾ, ಪ್ರಭಾ ಸುರೇಂದ್ರ, ಎಂ.ಎಸ್. ಭಾರತಿ, ಸಿ. ಲಕ್ಷ್ಮಿ, ಪಿ. ಭಾರತಿ, ಎಚ್.ಆರ್. ವಿಜಯಲಕ್ಷ್ಮಿ ಅವರನ್ನು ಆಯ್ಕೆ ಮಾಡುವಂತೆ ಡಿ. ಗೌರಮ್ಮ ಕೋರಿದ್ದಾರೆ.