ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶೇ. 22.75 ಅನುದಾನ ಸದ್ಬಳಕೆಗೆ ಸೂಚನೆ

Vishwanath S
Updated On : 14 Feb 2014, 11:26 am

ಮೈಸೂರು: ಪ.ಜಾತಿ, ಪ.ಪಂಗಡಕ್ಕೆ ಮೀಸಲಾದ ಶೇ. 22.75 ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಂತೆ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮೈಸೂರು ತಾಪಂ ಇಒ ಲಿಂಗಯ್ಯ ಹೇಳಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ.ಜಾತಿ ಮತ್ತು ಪ. ಪಂಗಡಗಳಿಗೆ ಮೀಸಲಿರುವ ಶೇ. 22.75 ಅನುದಾನವನ್ನು ಯಾವುದೇ ಕಾರಣಕ್ಕೂ ಇತರ ಯೋಜನೆಗೆ ಬಳಸದೆ, ಅನುದಾನದ ನಿರ್ದೇಶಿತ ಯೋಜನೆಗಳಿಗೆ ಮಾತ್ರ ಸಮರ್ಪಕವಾಗಿ ಬಳಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದರು.
ಶೇ. 22.75 ಅನುದಾನವನ್ನು ಗ್ರಾಪಂಗಳು ಸರಿಯಾಗಿ ಬಳಸುತ್ತಿಲ್ಲ. ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಕೊರತೆ ಇದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉತ್ತರಿಸಿದ ಅವರು, ಶೇ. 22.75ರ ಅನುದಾನ ದುರ್ಬಳಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದರು.
ಯಡಕೊಳ ಗ್ರಾಮದಲ್ಲಿ 65 ವರ್ಷ ಮೇಲ್ಪಟ್ಟ ಸುಮಾರು 15ರಿಂದ 20 ಮಂದಿಗೆ ವೃದ್ಧಾಪ್ಯ ವೇತನ ನೀಡುತ್ತಿಲ್ಲ ಎಂದು ಮಂಜು ಎಂಬವರು ದೂರಿದರು. ಗಿರಿದರ್ಶಿನಿ ಬಡಾವಣೆಯಿಂದ ಸತೀಶ್ ಎಂಬವರು ಕರೆ ಮಾಡಿ, ತಮ್ಮ ಅನಿಲ ಸಿಲಿಂಡರ್‌ಗೆ ನೀಡುವ ಅನುದಾನ ತಲುಪುತ್ತಿಲ್ಲ. ಆಧಾರ್ ಕಾರ್ಡ್ ಎಲ್ಲಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಯಡಕೊಳ ಗ್ರಾಮದಲ್ಲಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ, ಪಡಿತರ ಚೀಟಿ 10 ತಿಂಗಳಾದರೂ ಬಂದಿಲ್ಲ ಎಂದು ಕೆಲವರು ದೂರು ನೀಡಿದರು. ಒಟ್ಟು 14 ದೂರುಗಳು ಈ ಫೋನ್ ಇನ್ ಕಾರ್ಯಕ್ರಮದಲ್ಲಿ ದಾಖಲಾದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement