ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಧ್ಯಾತ್ಮ, ವಿಜ್ಞಾನ ಬದುಕಿನ 2 ಕಣ್ಣು: ಸಿಪಿಕೆ

Rashmi Kasaragodu
Updated On : 18 Feb 2014, 2:24 am

ಮೈಸೂರು: ಮನುಷ್ಯನ ಬದುಕಿಗೆ ಆಧ್ಯಾತ್ಮ ಹಾಗೂ ವಿಜ್ಞಾನ ಎರಡು ಕಣ್ಣುಗಳಿದ್ದಂತೆ ಎಂದು ಹಿರಿಯ ಸಾಹಿತಿ ಡಾ. ಸಿಪಿಕೆ ಹೇಳಿದರು.
ಹಾರ್ಡ್ವಿಕ್ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೂಢನಂಬಿಕೆ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರಗತಿ ಕುಂಠಿತವಾಗಿದೆ. ಪ್ರತಿಯೊಬ್ಬರೂ ನಿರಂಕುಶಮತಿಗಳಾಗಬೇಕೆಂಬುದು ರಾಷ್ಟ್ರಕವಿ ಕುವೆಂಪು ಅವರ ಆಶಯವಾಗಿತ್ತು. ಈ ದಿಸೆಯಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಅಲೋಚನೆಯತ್ತ ಯುವಜನತೆ ಮುಂದಾಗಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪುಟ್ಟು, ಮೈಸೂರು ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ. ಸುಮಲತಾ ಮುಖ್ಯ ಅತಿಥಿಗಳಾಗಿದ್ದರು. ಸಿಎಸ್ಐಕೆಎಸ್ಡಿ ಉಪಾಧ್ಯಕ್ಷ ಕೆ.ಪಿ. ದೇವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ಪ್ರಾಂತ್ಯ ಅಧ್ಯಕ್ಷ ರೆವರೆಂಡ್ ವಿಕ್ಟರ್, ನಿವೃತ್ತ ಪ್ರಾಧ್ಯಾಪಕ ಡಾ. ಯೋಹಾನ, ಸಂಸ್ಥೆ ಸಂಚಾಲಕ ಫ್ರಾಂಕ್ಲಿನ್ ಕಿಸ್ಟೋಟಫರ್, ಬಿಷಪ್ ಎನ್.ಸಿ. ಸಾರ್ಜೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಯಾಂಸನ್ ಜಯಂತ ಸಾಧು, ಹಾರ್ಡ್ವಿಕ್ ಕಾಲೇಜಿನ ಪ್ರಾಂಶುಪಾಲ ಹಿರಿಮರಳಿ ಧರ್ಮರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement