ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ತಾಪಂ ಸಭೆ

Rashmi Kasaragodu
Updated On : 18 Feb 2014, 2:27 am

ಕೆ.ಆರ್. ನಗರ: ತಾಪಂ ಸಾಮಾನ್ಯ ಸಭೆ ಫೆ.18ರ ಬೆಳಗ್ಗೆ ಅಧ್ಯಕ್ಷೆ ಶಶಿಕಲಾ ರಮೇಶ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಿಹಿ ವಿತರಣೆ
ಹುಣಸೂರು: ತಾಲೂಕಿನ ಧರ್ಮಾಪುರ ಗ್ರಾಪಂ ವ್ಯಾಪ್ತಿಯ ಹಳ್ಳದ ಕೊಪ್ಪಲಿನಲ್ಲಿ ರತ್ನಪುರಿ ವಿಎಸ್ಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ವಿದ್ಯಾರ್ಥಿಗಳನ್ನು ಜಿಪಂ ಸದಸ್ಯೆ ಡಾ.ಪುಷ್ಪ ಅಮರನಾಥ್ ಭೇಟಿ ಮಾಡಿ ಹಣ್ಣು, ಸಿಹಿ ವಿತರಿಸಿ ಶಿಬಿರದ ಉದ್ದೇಶ ತಿಳಿಸಿದರು.
ನಿರ್ದೇಶಕರ ಆಯ್ಕೆ
ಹುಣಸೂರು: ತಾಲೂಕಿನ ಕರ್ಣಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕರ್ಣಕುಪ್ಪೆಯ ಕೆ.ಬಿ. ಪುಟ್ಟರಾಜಪ್ಪ, ಉಪಾಧ್ಯಕ್ಷರಾಗಿ ಕುಳ್ಳಶೆಟ್ಟಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ತೋಟಪ್ಪ, ಪುಟ್ಟನಂಶೆಟ್ಟಿ, ಕೆ.ಸಿ ಪುಟ್ಟರಾಜಪ್ಪ, ಮಾದಪ್ಪ, ಕೆ.ಸಿ. ರಾಜಪ್ಪ, ಪ್ರೇಮಾಕುಮಾರಿ, ಶಿವಮ್ಮ, ಮಾದಯ್ಯ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಅಂಕಪ್ಪ ತಿಳಿಸಿದ್ದಾರೆ.
ಸಿಎಂಗೆ ಅಭಿನಂದನೆ
ಹುಣಸೂರು: ಹುಣಸೂರಿನ ಸಮಗ್ರ ಅಭಿವೃದ್ಧಿಗೆ ತಾವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಹುಣಸೂರಿಗೆ ಬಂಪರ್ ಕೊಡುಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದ್ದಾರೆ.
ಪಪಂಗೆ ನೇಮಕ
ಸರಗೂರು: ಸರಗೂರು ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯರಾಗಿ ರಂಗನಾಥ್, ಗೋವಿಂದರಾಜು ಮತ್ತು ಸುಶೀಲಾ ಅವರು ನೇಮಕವಾಗಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜು ಅವರು ಈ ಆದೇಶ ಹೊರಡಿಸಿದ್ದಾರೆ. ಸರಗೂರು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ರಾಜಣ್ಣ, ಮುಖಂಡ ಚನ್ನಪ್ಪನಾಯಕ ಅವರು ನಾಮ ನಿರ್ದೇಶನ ಸದಸ್ಯರಿಗೆ ಅಭಿನಂದಿಸಿದ್ದಾರೆ.
ಜೆಡಿಎಸ್ಗೆ ಆಯ್ಕೆ
ಎಚ್.ಡಿ. ಕೋಟೆ: ತಾಲೂಕಿನ ಜಿ.ಬಿ.ಸರಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ನಿರ್ದೇಶಕ ಸ್ಥಾನಗಳಿಗೆ ಜೆಡಿಎಸ್ ಬೆಂಬಲಿಗರು ಆಯ್ಕೆಯಾಗಿದ್ದು, ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ. ತಾಪಂ ಮಾಜಿ ಉಪಾಧ್ಯಕ್ಷ ಜೆಡಿಎಸ್ ಮುಖಂಡ ಕೃಷ್ಣೇಗೌಡ ಅವರ ಬೆಂಬಲಿಗರಾದ ಕಾಳೇಗೌಡ, ಚೆಲುವರಾಜು, ದೇವರಸೇಗೌಡ, ದೇವೇಗೌಡ, ನಿಂಗೇಗೌಡ, ಬಸವ ರಾಜು, ಗೌರಮ್ಮ, ಬೋರೇಗೌಡ, ಲಕ್ಷ್ಮಮ್ಮ, ಲಿಂಗಶೆಟ್ಟಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಲ್ಲ ಸದಸ್ಯರು ಪರಾಭವಗೊಂಡರು.
ರಥೋತ್ಸವ
ಸುತ್ತೂರು: ನಂಜನಗೂಡು ತಾಲೂಕಿನ ಗೋಣಹಳ್ಳಿ ಗ್ರಾಮದಲ್ಲಿ ಆದಿಶಕ್ತಿ ಮಾರಮ್ಮನವರ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ದೊಣ್ಣೆವರಸೆ, ಮಾರಮ್ಮನ ಕುಣಿತ ಮುಂತಾದ ಕಲಾತಂಡಗಳು ಭಾಗವಹಿಸಿದ್ದವು. ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಧರ್ಮೇಂದ್ರರಾಜು, ತಾಪಂ ಸದಸ್ಯ ಹೆಜ್ಜಿಗೆ ಗೋವಿಂದರಾಜು, ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಪುನೀತರಾದರು.
ಕರು ಪ್ರದರ್ಶನ
ಟಿ. ನರಸೀಪುರ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಿತು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ ಬೆನಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಕರುಗಳೊಂದಿಗೆ ಭಾಗವಹಿಸಿದ್ದರು. ಮುತ್ತಲವಾಡಿ ತಾಪಂ ಕ್ಷೇತ್ರದ ಸದಸ್ಯೆ ಜಯಲಕ್ಷ್ಮೀಕುಮಾರ್ ಮಿಶ್ರತಳಿ ಕರುಗಳ ಪ್ರದರ್ಶನ ಉದ್ಘಾಟಿಸಿದರು. ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿನ್ನಸ್ವಾಮಿ ಮಿಶ್ರತಳಿ ಕರುಗಳ ಬಗ್ಗೆ ತಿಳಿಸಿಕೊಟ್ಟರು. ಉತ್ತಮ ಕರುಗಳಿಗೆ ಬಹುಮಾನ ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments