ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾವಲುಪಡೆ ಘಟಕ ಚಾಲನೆ

Rashmi Kasaragodu
Updated On : 18 Feb 2014, 2:23 am

ಬೈಲಕುಪ್ಪೆ: ಸರ್ಕಾರದ ವತಿಯಿಂದ ಬಂದ ಸವಲತ್ತುಗಳನ್ನು ಒಗ್ಗಟ್ಟಿನಿಂದ ಪಡೆದು, ನಿಮ್ಮ ಗ್ರಾಮದ ಅಭಿವೃದ್ದಿಗೋಸ್ಕರ ಶ್ರಮಿಸಬೇಕೆಂದು ಪಿರಿಯಾಪಟ್ಟಣ ತಾ. ಕಾವಲು ಪಡೆಯ ಅಧ್ಯಕ್ಷ ಎಚ್.ವಿ. ಸುಬ್ರಮಣಿ ಹೇಳಿದರು.
ಸಮೀಪದ ಕೆಸವಿನಕೆರೆ ಗ್ರಾಮದಲ್ಲಿ ಕಾವಲುಪಡೆಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಒಳಗೆ ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾದಲ್ಲಿ ನಿಮ್ಮ ಗ್ರಾಮದಲ್ಲೆ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.ಘಟಕದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಮ್ಮ ಗ್ರಾಮದ ಸರ್ವೆ ನಂಬರ್ 2ರಲ್ಲಿ ಕೆಲವರು ಕೆರೆ ಒತ್ತುವರಿ ಮಾಡಿಕೊಂಡು ದನಕರುಗಳಿಗೆ ಕುಡಿಯಲು ನೀರಿಲ್ಲದೆ ತೊಂದರೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತೆರವು ಮಾಡಿಸಿಕೊಡಬೇಕೆಂದು ತಿಳಿಸಿದರು.
ತಾಲೂಕು ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಯೋಗೇಶ್, ಮಣಿ, ರಾಮೇಗೌಡ, ಕೊಪ್ಪ ಘಟಕದ ಅಧ್ಯಕ್ಷ ಕೃಷ್ಣ, ವಸಂತಕುಮಾರ್, ವರ್ಗಿಸ್, ಘಟಕದ ಪದಾಧಿಕಾರಿಗಳಾದ ಪ್ರಕಾಶ್, ಪಿ.ಟಿ. ಸ್ವಾಮಿ, ಮುತ್ತುರಾಜ್, ರಾಜಾಚಾರಿ, ಅನಿಲ್, ಸುನಿಲ್, ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement