ಕೆನರಾ ಬ್ಯಾಂಕ್ ನೂತನ ಶಾಖೆ ಆರಂಭ
ಮೈಸೂರು: ಕೆನರಾ ಬ್ಯಾಂಕ್ನ ಎನ್.ಆರ್ ಮೊಹಲ್ಲಾ ಶಾಖೆ ಹಾಗೂ ಇ- ಲಾಂಜ್ ಉದ್ಘಾಟನೆಯು ಸೋಮವಾರ ನಡೆಯಿತು. ಶಿವಾಜಿ ರಸ್ತೆಯಲ್ಲಿ ತೆರೆಯಲಾಗಿರುವ ಈ ಶಾಖೆಯನ್ನು ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ಕುಮಾರ್ ಗುಪ್ತಾ ಉದ್ಘಾಟಿಸಿದರು. ಮೈಸೂರು ವೃತ್ತದ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ, ಶಾಖೆಯ ಹಿರಿಯ ವ್ಯವಸ್ಥಾಪಕ ಪಿ. ಕೃಷ್ಣಮೂರ್ತಿ ಇದ್ದರು. ಇದು ಮೈಸೂರಿನ 24ನೇ ಶಾಖೆಯಾಗಿದ್ದು, ಇನ್ನು ಬೇರೆ ಬಡಾವಣೆಗಳಿಗೆ ಅಗತ್ಯವಾಗಿರುವ ಶಾಖಾ ಕೇಂದ್ರವನ್ನು ಹಾಗೂ ಎಟಿಎಂ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಹಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು ಎಂದು ಡಿಜಿಎಂ ಡಾ.ಎಸ್ಟಿ. ರಾಮಚಂದ್ರ ತಿಳಿಸಿದರು.