ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಾಯಾಳುಗಳಿಗೆ ಆರೋಗ್ಯ ವಿಮೆಯಡಿ ಚಿಕಿತ್ಸೆ

Rashmi Kasaragodu
Updated On : 18 Feb 2014, 2:22 am

ಹುಣಸೂರು: ರಾಜ್ಯದ ಯಾವುದೆ ವರ್ಗದ ವ್ಯಕ್ತಿ, ಎಷ್ಟೇ ಆದಾಯವಿದ್ದರೂ ಅಪಘಾತವಾದ 24 ಗಂಟೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಿ ಆರೋಗ್ಯ ತಪಾಸಣೆ ನಡೆಸುವ ರಾಜ್ಯ ಆರೋಗ್ಯ ವಿಮೆ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ತಾಲೂಕಿನ ರತ್ನಪುರಿ ದರ್ಗಾಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತವಾದಾಗ 24 ಗಂಟೆಯೊಳಗೆ ಕನಿಷ್ಠ 25 ಸಾವಿರ ಖರ್ಚು ಮಾಡುವ ಈ ವಿಮೆಯನ್ನು ಜಾರಿಗೆ ತರಲಾಗಿದೆ. ಈ ಕಾರ್ಯವನ್ನು ಯಾವುದೆ ಖಾಸಗಿ ವಿಮಾ ಸಂಸ್ಥೆಗೆ ನೀಡಿಲ್ಲ, ಬದಲಿಗೆ ಸರ್ಕಾರವೇ ಪ್ರತ್ಯೇಕ ಟ್ರಸ್ಟ್ ಮಾಡಿ ಆ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.
ಹುಣಸೂರು ಡಿ.ದೇವರಾಜು ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ, ಬಿಳಿಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ತುರ್ತು ವಾಹನ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ರತ್ನಪುರಿ ದರ್ಗಾ ಜಮಾಲ್ ಬೀಬೀ ಅವರ ದೇವಾಲಯವನ್ನು ಅಭಿವೃದ್ಧಿಪಡಿಸಲು ವಕ್ಫ್ ಬೋರ್ಡ್ ಮಂಡಳಿಯಿಂದ ಮತ್ತು ಸರ್ಕಾರದ ವಿಶೇಷ ಅನುದಾನದಿಂದ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದರು.
ಸಂಸದ ಎಚ್.ವಿಶ್ವನಾಥ್, ಶಾಸಕ ಎಚ್.ಪಿ. ಮಂಜುನಾಥ್, ಜಿಪಂ ಸದಸ್ಯೆ ಡಾ. ಪುಷ್ಪಾ ಅಮರನಾಥ್, ತಾಪಂ ಮಾಜಿ ಸದಸ್ಯರಾದ ಅಜ್ಗಾರಪಾಷಾ, ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಜೈವಿದ್ ಉಲ್ಲಾಖಾನ್, ಮುಜೀಫ್, ರಫೀಕ್, ದೀಪಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement