ಡಾ. ರಾಜಶೇಖರ್ಗೆ ರೈತವೈದ್ಯ ಪ್ರಶಸ್ತಿ
ಮೈಸೂರು: ಹಾಂಕಾಂಗ್ನಲ್ಲಿ ನಡೆದ 3ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮೈಸೂರಿನ ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ್ ಅವರಿಗೆ ಕುವೆಂಪು ನೇಗಿಲಯೋಗಿ ಅತ್ಯುತ್ತಮ ರೈತವೈದ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಕುವೆಂಪು ಕಲಾನಿಕೇತನ ಹಾಗೂ ಹಾಂಕಾಂಗ್ನ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಹಾಂಕಾಂಗ್ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸಪ್ರಸಾದ್ ಉದ್ಘಾಟಿಸಿದರು. ಡಾ. ಲತಾ ರಾಜಶೇಖರ್, ಡಾ. ಮಳಲಿ ವಸಂತಕುಮಾರ್ ಇದ್ದರು.
ಹೊರೆಯಲ್ಲದ ಬಜೆಟ್
ಮಧ್ಯಮ ವರ್ಗದವರೂ ಸೇರಿದಂತೆ ಯಾರಿಗೆ ಹೆಚ್ಚು ಹೊರೆ ಇಲ್ಲದ ಅಭಿವೃದ್ಧಿಗೆ ಪೂರಕವಾದ ಬಜೆಟ್ನ್ನು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 21 ಸಾವಿರ ಕೋಟಿ ನೀಡಿದೆ. ಮಹಿಳೆಯರ ರಕ್ಷಣೆಗೆ ನಿರ್ಭಯ ಹೆಸರಿನಲ್ಲಿ 1 ಸಾವಿರ ಕೋಟಿ ಮೀಸಲಿಟ್ಟಿದೆ. ಚಿನ್ನದ ಆಮದಿನ ಮೇಲೆ ಇದ್ದ ನಿಯಮವನ್ನು ಸಡಿಲಿಸಿದೆ. ಮಹಿಳೆಯರು 1 ಕೆ.ಜಿ ಮತ್ತು ಪುರುಷರು 500 ಗ್ರಾಂ. ಚಿನ್ನ ಆಮದು ಮಾಡಿಕೊಳ್ಳಬಹುದು. ಅಲ್ಲದೆ ರಫ್ತಿಗೆ ಕೆಲವು ವಿನಾಯಿತಿ ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೈಗಾರಿಕೆ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಸ್ವಾಗತಾರ್ಹ.
ಎಸ್. ಸುಧಾಕರ ಶೆಟ್ಟಿ, ಸಂಚಾಲಕರು, ಎಫ್ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿ, ಮೈಸೂರು
ಅಭಿವೃದ್ಧಿ ಪೂರಕ ಬಜೆಟ್
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಪೂರಕ ಬಜೆಟ್. ಕೇಂದ್ರ ಸರ್ಕಾರವು 30 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ 20 ಸಾವಿರ ಕೋಟಿ ಬಿಡುಗಡೆ ಮಾಡಿರುವುದು, 5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಅಲ್ಲದೆ ಕಾರು ಮತ್ತು ಸ್ಕೂಟರ್ ಬೆಳೆ ಇಳಿಕೆಯಾಗಿರುವುದು ಮಧ್ಯಮ ವರ್ಗದವರಿಗೆ ಪ್ರೋತ್ಸಾಹದಾಯಕವಾಗಿದೆ. ಈ ಬಜೆಟ್ ರಾಜ್ಯ ಬಜೆಟ್ಗೆ ಪೂರಕವಾಗಿದೆ.
ಎ.ಎಸ್. ಸತೀಶ್,
ಅಧ್ಯಕ್ಷರು, ಮೈಸೂರು ವಾಣಿಜ್ಯಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು